Top

ಸ್ಪೀಕರ್ ಸ್ಥಾನಕ್ಕಾಗಿ ಜೆಡಿಎಸ್,ಕಾಂಗ್ರೆಸ್ ಜಟಾಪಟಿ

ಸ್ಪೀಕರ್ ಸ್ಥಾನಕ್ಕಾಗಿ ಜೆಡಿಎಸ್,ಕಾಂಗ್ರೆಸ್ ಜಟಾಪಟಿ
X

ಅಂತು ಇಂತು ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಮುಂದಾಗಿದೆ. ಬುಧವಾರ ಹೆಚ್ಡಿಕೆ ಪ್ರಮಾಣ ವಚನ ಸ್ವೀಕಾರ ಮಾಡುವ ಹಿನ್ನೆಲೆ, ಸ್ಪೀಕರ್ ಸ್ಥಾನಕ್ಕಾಗಿ ಎರಡು ಪಕ್ಷಗಳ ನಡುವೆ ಫೈಟ್ ಜೋರಾಗಿದೆ. ಜೆಡಿಎಸ್ ಗೆ ಸ್ಪೀಕರ್ ಸ್ಥಾನಬೇಕೆಂದು ಹೆಚ್ ಡಿಡಿ ಪಟ್ಟು ಹಿಡಿದರೆ, ಸಿಎಂ ಸ್ಥಾನ ನಿಮಗೆ ಬಿಟ್ಟು ಕೊಟ್ಟಿದ್ದೇವೆ, ಸ್ಪೀಕರ್ ಸ್ಥಾನ ನಮಗೆ ಇರಲಿ ಎಂದು ಕೈ ನಾಯಕರು ಪಟ್ಟು ಹಿಡಿದಿದ್ದಾರೆ. ಎಸ್.ಟಿ.ರಾಮಸ್ವಾಮಿ ಸ್ಪೀಕರ್ ಮಾಡಲು ಜೆಡಿಎಸ್ ಚಿಂತನೆ ನಡೆಸಿದ್ರೆ, ರಮೇಶ್ ಕುಮಾರ್ ಕೂರಿಸಲು ಕೈ ನಾಯಕರು ಚಿಂತನೆ ನಡೆಸಿದ್ದಾರೆ.ಸದನವನ್ನ ಹದ್ದು ಬಸ್ತಿನಲ್ಲಿಡಲು ರಮೇಶ್ ಕುಮಾರ್ ಸೂಕ್ತ, ಆದ್ದರಿಂದ ಅವರನ್ನೇ ಸ್ಪೀಕರ್ ಮಾಡೋಣ ಎಂದು ಕಾಂಗ್ರೆಸ್ ಪಟ್ಟುಹಿಡಿದಿದೆ.ಈ ಬಗ್ಗೆ ಸೋನಿಯಾ ಗಾಂಧಿಯವರೊಂದಿಗೆ ಕಾಂಗ್ರೆಸ್ ಜೆಡಿಎಸ್ ಮುಖಂಡರು ಚರ್ಚೆ ನಡೆಸಲಿದ್ದು, ಸ್ಪೀಕರ್ ಯಾರಾಗುತ್ತಾರೆಂದು ಕಾದುನೋಡಬೇಕಿದೆ.

Next Story

RELATED STORIES