Top

ದೊರೆಯುವುದೇ ಶಾಸಕ ಟಿ ರಘುಮೂರ್ತಿಗೆ ಮಂತ್ರಿ ಗಿರಿ.?

ದೊರೆಯುವುದೇ ಶಾಸಕ ಟಿ ರಘುಮೂರ್ತಿಗೆ ಮಂತ್ರಿ ಗಿರಿ.?
X

ಚಿತ್ರದುರ್ಗ : ಜಿಲ್ಲೆಯ ಆರು ಕ್ಷೇತ್ರಗಳಲ್ಲಿ, ಐದು ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದೆ. ಆದರೇ, ಚಳ್ಳಕೆರೆಯಲ್ಲಿ ಮಾತ್ರ ಕಾಂಗ್ರೆಸ್ ತನ್ನ ಶಕ್ತಿ ಸಾಭಿತು ಪಡಿಸುವಲ್ಲಿ ಯಶಸ್ವಿಯಾಗಿದೆ.

ಇಂತಹ ಸಾಧನೆ ನಾಡಿದ ಚಳ್ಳಕೆರೆಯ ಶಾಸಕ ಟಿ ರಘುಮೂರ್ತಿಗೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆ ನಂತರ ದೊರೆಯಲಿದೆ ಎಂಬ ವಿಶ್ವಾಸ ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಅದರಲ್ಲೂ ಚಳ್ಳಕೆರೆ ಕ್ಷೇತ್ರದಲ್ಲಿ ಇದುವರೆಗೆ ಒಂದು ಪಕ್ಷದಿಂದ ಗೆದ್ದ ಶಾಸಕ ಇದೇ ಮೊದಲ ಬಾರಿ ಎರಡನೇ ಸಲ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಚಳ್ಳಕೆರೆ ಕ್ಷೇಥ್ರಕ್ಕೆ 1994 ರಲ್ಲಿ ಜೆಡಿಎಸ್‌ನಿಂದ ಗೆದ್ದ ತಿಪ್ಪೇಸ್ವಾಮಿ ಆಯ್ಕೆಯಾಗಿದ್ದರು. ನಂತರ ನಾಲ್ಕು ಅವಧಿಗೆ ಕ್ಷೇಥ್ರದಲ್ಲಿ ಶಾಸಕರಾದ ಯಾರಿಗೂ ಸಚಿವ ಸ್ಥಾನ ಭಾಗ್ಯ ದೊರತಿರಲ್ಲಿಲ್ಲ.

ಇನ್ನೂ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಶಾಸಕರು ಪ್ರತಿನಿಧಿಸುವ ಪಕ್ಷಗಳು ಅಧಿಕಾರ ಹಿಡಿದ್ದವು, ಆದರೆ ಕ್ಷೇಥ್ರಕ್ಕೆ ಮಾತ್ರ ಸಚಿವ ಸ್ಥಾನ ಭಾಗ್ಯ ಒಲಿದಿರಲಿಲ್ಲ. 2013ರಲ್ಲಿ ಮೊದಲ ಭಾರಿಗೆ ಶಾಸಕರಾಗಿ ಆಯ್ಕೆಯಾದ ಟಿ ರಘುಮೂರ್ತಿ ಸಚಿವ ಆಂಜನೇಯ ಕ್ಷೇತ್ರಕ್ಕೂ ಹೆಚ್ಚು ಅಭಿವೃದ್ದಿಯನ್ನು ಮಾಡಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ರಾಜ್ಯ ಟಾಪ್ ಟೆನ್ ಶಾಸಕರಲ್ಲಿ ಟಿ ರಘುಮೂರ್ತಿ ಒಬ್ಬರಾಗಿದ್ದು ಸಚಿವ ಸ್ಥಾನ ಸಿಕ್ಕರೆ ಚಳ್ಳಕೆರೆ ಕ್ಷೇತ್ರದ ಜೊತೆಗೆ, ಚಿತ್ರದುರ್ಗ ಜಿಲ್ಲೆ ಅಭಿವೃದ್ದಿಯಾಗುತ್ತದೆ ಎಂಬುದು ಜಿಲ್ಲೆಯ ಅಲವು ಮುಖಂಡರ ಅಭಿಪ್ರಾಯ.

ಇಂತಹ ನಿರೀಕ್ಷೆಯಲ್ಲಿ, ಚಳ್ಳಕೆರೆ ಕ್ಷೇತ್ರದ ಜನರು, ಶಾಸಕ ಟಿ ರಘುಮೂರ್ತಿ ಬೆಂಬಲಿಗರು ಇದ್ದಾರೆ. ಇವರ ನಿರೀಕ್ಷೆಯನ್ನು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಭರ್ತಿ ಮಾಡುವುದೇ? ಶಾಸಕ ಟಿ ರಘುಮೂರ್ತಿಗೆ ಮಂತ್ರಿಗಿರಿ ವಲಿದು ಬರುವುದೇ ಎಂಬುದನ್ನು ಕಾದುನೋಡಬೇಕಿದೆ.

Next Story

RELATED STORIES