ಐಪಿಎಲ್ನಿಂದ ಹೊರ ಬಿದ್ದ ಹಾಲಿ ಚಾಂಪಿಯನ್ ಮುಂಬೈ

X
TV5 Kannada21 May 2018 3:45 AM GMT
ನವದೆಹಲಿ: ಲೆಗ್ಸ್ಪಿನ್ನರ್ ಅಮಿತ್ ಮಿಶ್ರಾ ಮತ್ತು ಸಂದೀಪ್ ಲಾಮಿಚ್ಚಾನೆ ಸ್ಪಿನ್ ಮೋಡಿಗೆ ತಲೆದೂಗಿದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ 11 ರನ್ಗಳಿಂದ ಸೋತು ಟೂರ್ನಿಯಿಂದ ಹೊರ ಬಿದ್ದಿದೆ.
ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಮಾಡು ಇಲ್ಲಿವೇ ಮಡಿ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಡೆಲ್ಲಿ ಡೇರ್ ಡೆವಿಲ್ಸ್ ತಂಡ ನಿಗದಿತ ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಎಷಬ್ ಪಂತ್ 64, ವಿಜಯ್ ಶಂಕರ್ 43 ಮತ್ತು ಗ್ಲೇನ್ ಮ್ಯಾಕ್ಸ್ವೆಲ್ 23 ರನ್ ಬಾರಿಸಿದ್ರು. 175 ರನ್ಗಳ ಸವಾಲಿನ ಮೊತ್ತ ಬೆನ್ನತ್ತಿದ ಮುಂಬೈ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ಗಳು ಕೈಕೊಟ್ಟರು. ಆರಂಭಿಕ ಬ್ಯಾಟ್ಸ ಮನ್ ಎವಿನ್ ಲಿವೀಸ್ 48, ಬೆನ್ ಕಟ್ಟಿಂಗ್ 37 ರನ್ ಬಾರಿಸಿದ್ರು. ಕೊನೆಗೆ ಮುಂಬೈ 19.3 ಓವರ್ಗಳಲ್ಲಿ 163 ರನ್ಗಳಿಗೆ ಆಲೌಟ್ ಆಯಿತು. ಡೆಲ್ಲಿ ಪರ ಸಂದೀಪ್ ಲಾಮಿಚ್ಚಾನೆ, ಹರ್ಷಲ್ ಪಟೇಲ್ ಮತ್ತು ಅಮಿತ್ ಮಿಶ್ರ ತಲಾ 3 ವಿಕೆಟ್ ಪಡೆದು ಮಿಂಚಿದ್ರು.
Next Story