ಗೋಲ್ ಮಷಿನ್ ಮೆಸ್ಸಿಗೆ ಗೋಲ್ಡ್ ಶೂ ಟೈಟಲ್..!

X
TV5 Kannada21 May 2018 12:18 PM GMT
ಬಾರ್ಸಿಲೋನಾ ಸ್ಟ್ರೈಕರ್ ಲಿಯೊನೆಲ್ ಮೆಸ್ಸಿ 5ನೇ ಯುರೋಪಿಯನ್ ಗೋಲ್ಡನ್ ಶೂ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ. ಲಾ ಲೀಗಾ ಫೈನಲ್ ಪಂದ್ಯದಲ್ಲಿ ರಿಯಲ್ ಸೊಸಿದಾಡ್ ತಂಡವನ್ನು 1-0 ಗೋಲ್ ನಿಂದ ಮಣಿಸಿದ ಬಳಿಕ ಮೆಸ್ಸಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಅರ್ಜೆಂಟೈನಾದ ಈ ಆಟಗಾರ 2017-18 ಸೀಸನ್ನಲ್ಲಿ ಒಟ್ಟು 34 ಗೋಲ್ ಸಿಡಿಸಿ 68 ಅಂಕ ಸಂಪಾದಿಸಿದ್ದರು. ಮೆಸ್ಸಿ ಈ ಸಾಹಸಕ್ಕೆ ಶ್ರೇಷ್ಟ ಪ್ರಶಸ್ತಿ ಒಲಿದಿದೆ. ಮೆಸ್ಸಿ ಈ ಹಿಂದೆ 2010, 2012, 2013 ಮತ್ತು 2016-17ರಲ್ಲಿ ಈ ಸಾಧನೆ ಮಾಡಿದ್ದರು.
Next Story