ಲುಂಗಿ ಗಿಡಿ ದಾಳಿಗೆ ಪಂಜಾಬ್ ಕಿಂಗ್ಸ್ ತತ್ತರ

X
TV5 Kannada21 May 2018 3:35 AM GMT
ಪುಣೆ : ಯುವ ವೇಗಿ ಲುಂಗಿ ಗಿಡಿ ಅವರ ಮಾರಕ ದಾಳಿಗೆ ತತ್ತರಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್ಗಳ ಅಂತರದಿಂದ ಸೋತು ಪ್ಲೇ ಆಫ್ಗೆ ಹೋಗುವ ಅವಕಾಶದಿಂದ ವಂಚಿತವಾಯಿತು. ಡು ಆರ್ ಡೈ ಮ್ಯಾಚ್ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಶ್ವಿನ್ ನೇತೃತ್ವದ ಪಂಜಾಬ್ ತಂಡ 19.4 ಓವರ್ಗಳಲ್ಲಿ 153 ರನ್ಗಳಿಗೆ ಆಲೌಟ್ ಆಯಿತು. ತಂಡದ ಪರ ಕರುಣ್ ನಾಯರ್ 54, ಮನೋಜ್ ತಿವಾರಿ 35 ಮತ್ತು ಡೇವಿಡ್ ಮಿಲ್ಲರ್ 24 ರನ್ ಬಾರಿಸಿದ್ರು. ಚೆನೈ ಪರ ಲುಂಗಿ ಗಿಡಿ 10 ರನ್ ನೀಡಿ 4 ವಿಕೆಟ್ ಪಡೆದ್ರೆ, ಶಾರ್ದೂಲ್ ಠಾಕೂರ್ ಮತ್ತು ಡ್ವೇನ್ ಬ್ರಾವೋ ತಲಾ 2 ವಿಕೆಟ್ ಪಡೆದ್ರು. 154 ರನ್ಗಳ ಸವಾಲಿನ ಮೊತ್ತ ಬೆನ್ನತ್ತಿದ ಚೆನ್ನೈ ತಂಡಕ್ಕೆ ಸುರೇಶ್ ರೈನಾ 61, ದೀಪಕ್ ಚಹರ್ 39 ರನ್ ಬಾರಿಸಿದ್ರು. ಚೆನ್ನೈ ತಂಡ 19.1 ಓವರ್ಗಲ್ಲಿ 5 ವಿಕೆಟ್ ನಷ್ಟಕ್ಕೆ 159 ರನ್ ಬಾರಿಸಿ ಪಂಜಾಬ್ ತಂಡವನ್ನ ಟೂರ್ನಿಯಿಮದ ಹೊರಹಾಕಿತು.
Next Story