Top

ಲೋಕಸಭೆಯಲ್ಲಿ ಸ್ಪರ್ಧೆ ನಿರ್ಧರಿಸಿಲ್ಲ: ಉಪೇಂದ್ರ

ಲೋಕಸಭೆಯಲ್ಲಿ ಸ್ಪರ್ಧೆ ನಿರ್ಧರಿಸಿಲ್ಲ: ಉಪೇಂದ್ರ
X

ಪ್ರಜಾಕೀಯ ಪಕ್ಷದ ಕೆಲಸಗಳು ನಿರಂತರವಾಗಿ ನಡೆಯಲಿವೆ. ಆದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿರ್ಧಾರವಾಗಿಲ್ಲ ಎಂದು ನಟ ಹಾಗೂ ಪ್ರಜಾಕೀಯ ಪಕ್ಷದ ಮುಖಂಡ ಉಪೇಂದ್ರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಐ ಲವ್ ಯು ಚಿತ್ರದ ಮುಹೂರ್ತದಲ್ಲಿ ಮಾತನಾಡಿದ ಅವರು, ಇತ್ತೀಚಿನ ರಾಜಕೀಯ ಬೆಳವಣಿಗೆ ಯಾರದ್ದು ತಪ್ಪಲ್ಲ. ಯಾವುದೇ ಪಕ್ಷಕ್ಕೆ ಬಹುಮತ ಬಾರದೇ ಇರುವುದೇ ಕಾರಣ ಎಂದು ಅಭಿಪ್ರಾಯಪಟ್ಟರು.

ದುಡ್ಡಿನ ರಾಜಕಾರಣ ಹೈಡ್ರಾಮಾ ನೋಡುತ್ತಿದ್ದೀರಿ. ಆದರೆ ಪ್ರಜಾಕೀಯದಿಂದ ಇದೆಲ್ಲವೂ ಬದಲಾಗಲಿದೆ. ಸದ್ಯ ಕುಮಾರಸ್ವಾಮಿ ಆಡಳಿತ ಹೇಗಿರಲಿದೆ ಅನ್ನೋದನ್ನ ನೋಡಬೇಕು ಎಂದು ಉಪೇಂದ್ರ ಹೇಳಿದರು.

Next Story

RELATED STORIES