Top

"ಕುಮಾರಕೃಪಾ" ಆಗಲಿದೆಯಾ "ಏಕದಂತ"

ಕುಮಾರಕೃಪಾ ಆಗಲಿದೆಯಾ ಏಕದಂತ
X

ಹುಬ್ಬಳ್ಳಿ : ರಾಜ್ಯದ ಸಿಎಂ ಪಟ್ಟ ಯಾರೇ ಏರಲು ಉತ್ತರ ಕರ್ನಾಟಕದ ಶಾಸಕರು ಮಹತ್ವದ ಪಾತ್ರ ವಹಿಸುತ್ತಾರೆ ಎಂಬುದು ಶತ ಸತ್ಯ. ಆದ್ದರಿಂದ ಈ ಸಲ ಕುಮಾರಸ್ವಾಮಿ ಅವರು ಸ್ವತಃ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚು ಮಹತ್ವ ನೀಡಲು ಮುಂದಾಗಿದ್ದರು. ಅವರು ಉತ್ತರಕರ್ನಾಟಕ ಭಾಗದಲ್ಲಿ ಎಷ್ಟು ಸಲ ಪ್ರವಾಸ ಮಾಡಿದರು.? ಯಾವ ರೀತಿ ಪಕ್ಷ ಸಂಘಟನೆ ಮಾಡಿದರು ಅವರದೇ ಪಕ್ಷದ ನಾಯಕರಲ್ಲಿ ಅಸಮಾಧಾನವಿದೆ.

ಆದರೆ ಈಗ ಅದೃಷ್ಟ ಅವರ ಪಾಲಿಗೆ ಒಲಿದು ಬಂದಿದ್ದು, ರಾಜ್ಯದ ನೂತನ ಮುಖ್ಯಮಂತ್ರಿ ಯಾಗುತ್ತಿರುವದರಿಂದ ಹುಬ್ಬಳ್ಳಿಯಲ್ಲಿರುವ ಅವರ ಮನೆಗೆ ಶುಕ್ರದೆಸೆ ಬರಲಿದೆಯೇ ಎಂಬುದು ಇದೀಗ ಕುತೂಹಲ ಕೆರಳಿಸಿದೆ. ಕುಮಾರಸ್ವಾಮಿ ಉತ್ತರ ಕರ್ನಾಟಕದಲ್ಲಿ ಪಕ್ಷವನ್ನ ಬಲಪಡಿಸುವ ಉದ್ದೇಶದಿಂದ ಎರಡೂ ವರ್ಷಗಳ ಈಚೆಗೆ ನಗರದ ಮಾಯಕಾರ ಕಾಲೊನಿಯಲ್ಲಿ ಮನೆ ಮಾಡಿದ್ದ ಕುಮಾರಸ್ವಾಮಿ ಈ ಮನೆಯನ್ನು ಬಳಸಿದ್ದೇ ಅಪರೂಪ.

ಇದೀಗ ಅವರು ಮುಖ್ಯಮಂತ್ರಿ ಯಾಗುತ್ತಿರುವದರಿಂದ ಏಕದಂತ ನಿವಾಸ ಕುಮಾರಕೃಪಾ ಆಗಲಿದೆಯೇ.? ಅಥವಾ ಅನಾಥವಾಗಲಿದೆಯಾ..? ಎಂಬ ಕುತೂಹಲದ ಪ್ರಶ್ನೆ ಗರಿಗೆದರಿದೆ.‌ ಕುಮಾರಸ್ವಾಮಿ ಇದೇ ಏಕದಂತನ್ನು ಖಾಯಾಂ ಉಳಿಸಿಕೊಂಡು ಹೋಗ್ತಾರಾ ಅಥವಾ ಮನೆಯನ್ನು ಖಾಲಿ ಮಾಡಸ್ತಾರಾ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

Next Story

RELATED STORIES