Top

ಕರ್ನಾಟಕದಲ್ಲಿ ಪ್ರತ್ಯೇಕತೆಯ ಕೂಗು, ಹೆಚ್ಡಿಕೆಗೆ ಮತ್ತೊಂದು ಸಂಕಷ್ಟ

ಕರ್ನಾಟಕದಲ್ಲಿ ಪ್ರತ್ಯೇಕತೆಯ ಕೂಗು, ಹೆಚ್ಡಿಕೆಗೆ ಮತ್ತೊಂದು ಸಂಕಷ್ಟ
X

ಇಷ್ಟು ದಿನ ಒಗ್ಗಟ್ಟಾಗಿದ್ದ ಕನ್ನಡನಾಡಿನಲ್ಲೀಗ ಪ್ರತ್ಯೇಕತೆಯ ಕೂಗು ಕೇಳಿ ಬಂದಿದೆ. ಈ ಮೂಲಕ ಹೆಚ್.ಡಿ.ಕುಮಾರಸ್ವಾಮಿಗೂ ಸವಾಲು ಎದುರಾಗಿದೆ. ಹೌದು ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ಅಸ್ಥಿತ್ವಕ್ಕೆ ಬರುವ ಮುನ್ನವೇ, ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕತೆಯ ಕೂಗು ಕೇಳಿ ಬಂದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಜನಾದೇಶ ಸಿಕ್ಕಿದೆ.ಆದರೂ ಜೆಡಿಎಸ್ ಆಡಳಿತವನ್ನು ಸಹಿಸಿಕೊಳಬೇಕಾ .? ಎಂದು ಪ್ರಶ್ನೆ ಕೇಳುವ ಮೂಲಕ ಉತ್ತರ ಕರ್ನಾಟಕದ ಕೆಲವರು ಬಂಡಾಯ ಎದ್ದಿದ್ದಾರೆ.ಉತ್ತರ ಕರ್ನಾಟಕದ ಜನ ನಾವು ಮತದಾನ ಮಾಡಿ ಜನಾದೇಶ ಮಾಡಿರೋದು ಬಿಜೆಪಿಗೆ ಅರ್ಥಾತ್ ಯಡಿಯೂರಪ್ಪನವರಿಗೆ . ಆದರ ನಾವು ವೋಟೇ ಹಾಕದಿರೋ ಕುಮಾರಸ್ವಾಮಿ ನಮ್ಮ ಮುಖ್ಯಮಂತ್ರಿ ಆಗ್ತಾರಂತೆ , ನಾವು ಧಿಕ್ಕರಿಸಿದ ಜೆಡಿಎಸ್ ಸರ್ಕಾರವಂತೆ..ಕರ್ನಾಟಕದ ಭಾಗವಾಗಿ ನಾವು ಇದ್ದೇವೆ ಅನ್ನೋ ಒಂದು ಕಾರಣಕ್ಕೆ ನಾವು ಇದನ್ನೆಲ್ಲ ಒಪ್ಪಬೇಕಾ ? ಹೀಗೆ ನಮ್ಮ ಮೇಲೆ ನಮ್ಮ ಜನಾದೇಶ ವಿರೋಧಿಸಿ, ಅನ್ಯಾಯ ನಡೆಯೋದಾದರೆ ನಾವು ಯಾಕೆ ಪ್ರತ್ಯೇಕ ರಾಜ್ಯ ಮಾಡಿಕೊಳ್ಳಬಾರದು? ನಾವು ಜನಾದೇಶ ಮಾಡದೆ ಇದ್ದರೂ ಕುಮಾರಸ್ವಾಮಿ ಮುಖ್ಯಮಂತ್ರಿ ಆಗೋದಾದರೆ ಅವರನ್ನ ನಾವು ಹೇಗೆ ನಮ್ಮ ಮುಖ್ಯಮಂತ್ರಿ ಅಂತಾ ಒಪ್ಪಕೊಳ್ಳೋದು ? ನಮ್ಮ ಜನಾದೇಶ ಇಲ್ಲದ ಸರ್ಕಾರ ಹೇಗೆ ನಮ್ಮ ಮೇಲೆ ಅಧಿಕಾರ ನಡೆಸುತ್ತದೆ. ಇಷ್ಟೆಲ್ಲ ಅನ್ಯಾಯ ಆಗೋದಾದರೆ ನಾವು ಯಾಕೆ ಉತ್ತರ ಕರ್ನಾಟಕವನ್ನ ಬೇರೆ ಮಾಡಿಕೊಳ್ಳಬಾರದು? ನಮ್ಮ ಸ್ವಾತಂತ್ರ್ಯಕ್ಕಾಗಿ ನಾವು ಹೋರಾಡಲೇ ಬೇಕು...ಕುಮಾರಸ್ವಾಮಿUKCMಅಲ್ಲ...ಎಂದು ಸಂದೇಶ ರವಾನಿಸುವ ಮೂಲಕ ಜನರನ್ನು ಒಟ್ಟು ಮಾಡಲಾಗುತ್ತಿದೆ.

Next Story

RELATED STORIES