Top

ಕಿಚ್ಚನಿಂದಲೇ ಡ್ರಾಪ್ ಆಯ್ತಾ ‘ಕಲಿ’ ಸಿನಿಮಾ?

ಕಿಚ್ಚನಿಂದಲೇ ಡ್ರಾಪ್ ಆಯ್ತಾ ‘ಕಲಿ’ ಸಿನಿಮಾ?
X

ದಿ ವಿಲನ್ ಸಿನಿಮಾ ಶುರುವಾಗೋಕು ಮೊದ್ಲು ಪ್ರೇಮ್​ ನಿರ್ದೇಶನದಲ್ಲಿ ಸುದೀಪ್, ಶಿವರಾಜ್​ಕುಮಾರ್ ಕಾಂಬಿನೇಷನ್​ನಲ್ಲಿ ಕಲಿ ಅನ್ನೋ ಸಿನಿಮಾ ಸೆಟ್ಟೇರಿದ್ದು ಗೊತ್ತೇಯಿದೆ. ಆದ್ರೆ ಇದ್ದಕ್ಕಿದಂತೆ ಆ ಚಿತ್ರವನ್ನ ಡ್ರಾಪ್ ಮಾಡಿ ದಿ ವಿಲನ್ ಕಥೆ ಶುರು ಮಾಡಿದ್ದರು ಪ್ರೇಮ್. ಅಷ್ಟಕ್ಕೂ ಕಲಿ ಸಿನಿಮಾ ನಿಂತಿದ್ಯಾಕೆ ಅನ್ನೋ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಸ್ವತ: ಸುದೀಪ್ ಆ ಚಿತ್ರವನ್ನ ಕೈ ಬಿಡುವಂತೆ ಹೇಳಿದ್ರಂತೆ.

ಶಿವಣ್ಣ ನಡೆಸಿಕೊಡುವ ‘ನಂಬರ್ ಒನ್ ಯಾರಿ’ ಟಾಕ್ ಶೋನಲ್ಲಿ ಸುದೀಪ್, ಕಲಿ ಚಿತ್ರ ಡ್ರಾಪ್ ಆದ ಕುರಿತು ಮಾತನಾಡಿದ್ದಾರೆ. ‘ಮುಹೂರ್ತವಾದ ಮೇಲೆ ನನಗ್ಯಾಕೋ ಯಾವುದು ಪಾಸಿಟಿವ್ ಅನ್ನಿಸಲಿಲ್ಲ. ಮಹಾಭಾರತದ ಆ ಒಂದು ಭಾಗವನ್ನು ಮುಟ್ಟಬೇಡಿ ಎಂದು ತುಂಬ ಜನ ಹೇಳಿದ್ರು. ಅದಕ್ಕೆ ನನಗೆ ಇದು ಸರಿ ಅನ್ನಿಸಲಿಲ್ಲ. ಹಾಗಾಗಿ ಕಥೆ ಬದಲಾವಣೆ ಮಾಡಿ ಕಲಿ ಚಿತ್ರದ ಬದಲು ದಿ-ವಿಲನ್ ಆಯ್ತು’ ಅಂತ ಸುದೀಪ್ ಹೇಳಿದ್ದಾರೆ.

ಸಿ. ಆರ್ ಮನೋಹರ್ ನಿರ್ಮಿಸಬೇಕಿದ್ದ ಕಲಿ ಚಿತ್ರದ ಟೈಟಲ್ ಲಾಂಚ್ ಅದ್ದೂರಿಯಾಗಿಯೇ ನಡೆದಿತ್ತು. ನಂತ್ರ ಸಿಂಗಧೂರು ದೇವಸ್ಥಾನದಲ್ಲಿ ಚಿತ್ರದ ಮಹೂರ್ತ ಕೂಡ ನಡೆದಿತ್ತು. ಅರ್ಜುನ್ ಜನ್ಯಾ ಚಿತ್ರಕ್ಕಾಗಿ ಟ್ಯೂನ್​​ ಕಂಪೋಸ್ ಮಾಡೋಕೆ ಪ್ರಾರಂಭಿಸಿದ್ದರು. ಇನ್ನೇನು ಶೂಟಿಂಗ್ ಸ್ಟಾರ್ಟ್ ಆಗ್ಬೇಕು ಅನ್ನೋ ಹೊತ್ತಲ್ಲೇ ಸಿನಿಮಾ ಡ್ರಾಪ್ ಆಗಿ ಅಭಿಮಾನಿಗಳಿಗೆ ಬೇಸರ ತರಿಸಿತ್ತು.

Next Story

RELATED STORIES