Top

ಜಾರಕಿಹೊಳಿ ಸಹೋದರರಿಗೆ ಮಂತ್ರಿ ಸ್ಥಾನ ನೀಡಬಾರದು : ಶಂಕರ ಮುನವಳ್ಳಿ ಆಗ್ರಹ

ಜಾರಕಿಹೊಳಿ ಸಹೋದರರಿಗೆ ಮಂತ್ರಿ ಸ್ಥಾನ ನೀಡಬಾರದು : ಶಂಕರ ಮುನವಳ್ಳಿ ಆಗ್ರಹ
X

ಬೆಳಗಾವಿ : ಕಾಂಗ್ರೆಸ್ ಮತ್ತು ಜೆಡಿಎಸ ಮೈತ್ರಿ ಸರ್ಕಾರದಲ್ಲಿ ಯಾವುದೇ ಕಾರಣಕ್ಕೂ ಜಾರಕಿಹೊಳಿ ಸಹೋದರರಿಗೆ ಮಂತ್ರಿ ಸ್ಥಾನ ನೀಡದಂತೆ ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಆಗ್ರಹಿಸಿದ್ದಾರೆ.

ಈ ಕುರಿತು ನಗರದಲ್ಲಿ ಸುದ್ಧಿಗೋಷ್ಠಿ ನಡೆಸಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 10 ರಿಂದ 12ಸ್ಥಾನ ಗೆಲ್ಲಿಸುವುದಾಗಿ ಜಾರಕಿಹೊಳಿ ಸಹೋದರರು ಹೇಳಿದ್ರು. ಆದ್ರೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಲ್ಲಿ ಇವರದ್ದು ಏನು ಶ್ರಮವಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರದಲ್ಲಿ ಸತೀಶ ಜಾರಕಿಹೊಳಿ ಅಥವಾ ರಮೇಶ ಜಾರಕಿಹೊಳಿ ಅವರನ್ನ ಮಂತ್ರಿ ಮಾಡಬಾರದು ಎಂದು ಆಗ್ರಹಿಸಿದರು.

ಇನ್ನೂ ಜಾರಕಿಹೊಳಿ ಸಹೋದರರ ಬದಲಾಗಿ ಲಕ್ಷ್ಮಿ ಹೆಬ್ಬಾಳಕರ, ಅಂಜಲಿ ನಿಂಬಾಳಕರ ಹಾಗೂ ಗಣೇಶ ಹುಕ್ಕೇರಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಅದರಲ್ಲೂ ಬೆಳಗಾವಿ ಜಿಲ್ಲೆಯ ಉಸ್ತುವಾರಿಯನ್ನ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ನೀಡಬೇಕೆಂದು ಶಂಕರ ಮುನವಳ್ಳಿ ಆಗ್ರಹಿಸಿದ್ದಾರೆ.

ಅಲ್ಲದೇ, ಮಂತ್ರಿ ಸ್ಥಾನ ನೀಡಿದ್ರೆ ಜಾರಕಿಹೊಳಿ ಕುಟುಂಬದಿಂದ ಮೈತ್ರಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಭೂ ವಿವಾದ ವಿಚಾರವನ್ನ ಸಿಬಿಐಗೆ ವಹಿಸಬೇಕೆಂದು ಹೈಕೋರ್ಟಗೆ ನಾನು ಅರ್ಜಿ ಸಲ್ಲಿಸಿರುವೆ. ಅದರಲ್ಲಿ ಸತೀಶ ಜಾರಕಿಹೊಳಿಯನ್ನ ಆರೋಪಿಯಾಗಿ ಪರಿಗಣಿಸುವಂತೆ ಹೇಳಿರುವೆ. ಇನ್ನು ಉಪ ಮುಖ್ಯಮಂತ್ರಿ ಸ್ಥಾನವನ್ನ ಡಿ.ಕೆ. ಶಿವಕುಮಾರ ಅವರಿಗೆ ನೀಡಬೇಕೆಂದು ಶಂಕರ ಮುನವಳ್ಳಿ ಆಗ್ರಹಿಸಿದರು.

Next Story

RELATED STORIES