Top

I LOVE YOU ಅಂತ ಮತ್ತೆ ಬಂದ ಉಪ್ಪಿ

I LOVE YOU ಅಂತ ಮತ್ತೆ ಬಂದ ಉಪ್ಪಿ
X

ಸ್ಯಾಂಡಲ್​ವುಡ್​ಗೆ ಗುಡ್​ಬೈ ಹೇಳಿ ರಾಜಕೀಯಕ್ಕೆ ಹೋಗ್ತೀನಿ ಅಂದಿದ್ದ ರಿಯಲ್ ಸ್ಟಾರ್ ಉಪೇಂದ್ರ ಇದೀಗ ಯುಟರ್ನ್​ ಹೊಡೆದಿದ್ದಾರೆ. ಹೊಸ ಚಿತ್ರಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟು ಮುಹೂರ್ತ ಕೂಡ ಮಾಡಿ ಮುಗಿಸಿದ್ದಾರೆ. ಚಿತ್ರಕ್ಕೆ ಐಲವ್​ಯೂ ಅಂತ ಟೈಟಲ್​ ಇಟ್ಟಿದ್ದ ಚಿತ್ರತಂಡ, ಇತ್ತೀಚೆಗೆ ಪೋಟೋಶೂಟ್ ರಿವೀಲ್ ಮಾಡಿತ್ತು. ಇದೀಗ ಅಧಿಕೃತವಾಗಿ ಸಿನಿಮಾ ಸೆಟ್ಟೇರಿದೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಐಲವ್​ಯೂ ಸಿನಿಮಾ ಮುಹೂರ್ತ ಕಂಡಿತು. ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್ ಕ್ಲಾಪ್​ ಮಾಡೋ ಮೂಲಕ ಚಿತ್ರಕ್ಕೆ ಚಾಲನೆ ಕೊಟ್ಟರು. ಬ್ರಹ್ಮ ಚಿತ್ರದ ನಂತ್ರ ಲಾಂಗ್​ ಗ್ಯಾಪ್​ ಆದ್ಮೇಲೆ ಉಪ್ಪಿಗೆ ಆ್ಯಕ್ಷನ್ ಕಟ್ ಹೇಳ್ತಿರೋ ನಿರ್ದೇಶಕ ಆರ್​.ಚಂದ್ರು ವಿಭಿನ್ನ ಸ್ಟೋರಿ ಮೂಲಕ ಉಪ್ಪಿಯನ್ನ ತೆರೆಮೇಲೆ ತರ್ತಿದ್ದಾರೆ. ಐಲವ್​ಯೂ ಟೈಟಲ್​ನ್ನ ಸಿಂಬಲ್​ ಮೂಲಕ ಡಿಫ್ರೆಂಟಾಗಿ ಡಿಸೈನ್​ ಮಾಡಲಾಗಿದ್ದು, ಈ ಹಿಂದೆಯೇ ಉಪ್ಪಿ ಸೂಪರ್​ ಸಿನಿಮಾದಲ್ಲಿ ಇಂಥದ್ದೋಂದು ಹೊಸಪ್ರಯತ್ನ ಮಾಡಿ ಗೆದ್ದಿದ್ರು.

ಐ ಲವ್​ ಯೂ ಸಿನಿಮಾದಲ್ಲಿ ಉಪ್ಪಿ ಹೇರ್​ ಸ್ಟೈಲ್​, ಲುಕ್​ , ಕಾಸ್ಟ್ಯೂಮ್​ ಎಲ್ಲವೂ ಸಖತ್​ ಸ್ಟೈಲಿಶ್ ಆಗಿದ್ದು, ಉಪ್ಪಿ ಸ್ಟೈಲಿಶ್ ಕಾಲೇಜ್ ಹುಡ್ಗನಾಗಿ ಮಿಂಚಲಿದ್ದಾರೆ. ಇನ್ನು ಚಂದ್ರು ಈ ಸಿನಿಮಾನ ತುಂಬಾ ವೆರೈಟಿಯಾಗಿ ಡಿಸೈನ್ ಮಾಡಿದ್ದು, ಉಪ್ಪಿಯನ್ನ ಒಂದೇ ಒಂದು ಲೈನ್ ಸ್ಟೋರಿಯಿಂದ ಬೋಲ್ಡ್ ಮಾಡಿದ್ದಾರೆ. ಚಿತ್ರದಲ್ಲಿ ಲವ್​ಸ್ಟೋರಿ ಜೊತೆಗೆ ಆ್ಯಕ್ಷನ್ ಪ್ಯಾಕ್​ ಕೂಡ ಇದ್ದು, ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ರೆಡಿಯಾಗಲಿದೆ.

ಈಗಾಗ್ಲೇ ಟೆಕ್ನಿಶಿಯನ್ಸ್ ಫೈನಲ್​ ಆಗಿದ್ದು, ಮಫ್ತಿ ಸಿನಿಮಾ ಖ್ಯಾತಿಯ ಕ್ಯಾಮರಾಮ್ಯಾನ್ ನವೀನ್​ ಮತ್ತು ಸಂಗೀತ ನಿರ್ದೇಶಕನಾಗಿ ಹೊಸ ಪ್ರತಿಭೆ ಕಿರಣ್​ ಆಯ್ಕೆಯಾಗಿದ್ದಾರೆ. ಜೊತೆಗೆ ಪೀಟರ್ ಹೇನ್ ಸಾಹಸ ಸಂಯೋಜನೆಯಲ್ಲಿ ಥ್ರಿಲ್ಲಿಂಗ್ ಸ್ಟಂಟ್ಸ್ ಮೂಡಿಬರಲಿದ್ದು, ಉಳಿದಂತೆ ನಾಯಕಿಯ ಮತ್ತು ಕಲಾವಿದರ ಆಯ್ಕೆಯಷ್ಟೇ ಆಗಬೇಕಿದೆ. ಎಲ್ಲಾ ಅಂದುಕೊಂಡಂತಾದ್ರೆ ಇದೇ ಜೂನ್​ 7 ರಿಂದ ಶೂಟಿಂಗ್​ ಗೆ ಚಾಲನೆ ನೀಡಲಿದ್ದಾರೆ ಚಂದ್ರು ಅಂಡ್ ಟೀಂ.

Next Story

RELATED STORIES