Top

ಹುಟ್ಟೂರಿಗೆ ಭೇಟಿ ನೀಡಿದ ಹೆಚ್.ಡಿ.ಕುಮಾರಸ್ವಾಮಿ

ಹುಟ್ಟೂರಿಗೆ ಭೇಟಿ ನೀಡಿದ ಹೆಚ್.ಡಿ.ಕುಮಾರಸ್ವಾಮಿ
X

ಹಾಸನ: ನಿಯೋಜಿತ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಬುಧವಾರ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆ, ತಮ್ಮ ಹುಟ್ಟೂರಾದ ಹೊಳೆನರಸಿಪುರಕ್ಕೆ ಭೇಟಿ ನೀಡಿದರು. ಪ್ರಮಾಣವಚನ ಸವೀಕರಿಸುವ ಮುನ್ನ, ಕುಟುಂಬ ಸಮೇತರಾಗಿ, ಲಕ್ಷ್ಮಿ ನರಸಿಂಹ ಸ್ವಾಮಿ, ಹರದನಹಳ್ಳಿ ಶಿವನ ಆಶೀರ್ವಾದ ಪಡೆದರು.

ಈ ವೇಳೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ದೇವರ ಅನುಗ್ರಹ, ಹೆತ್ತವರ ಆಶೀರ್ವಾದ ದಿಂದ ನಾಡಿನ ಜನರ ಸೇವೆ ಮಾಡೋ ಅವಕಾಶ ಸಿಕ್ಕಿದೆ. ನಾನು ಹುಟ್ಟಿ ಬೆಳೆದ ಊರಿನಲ್ಲಿ, ಲಕ್ಷ್ಮಿ ನರಸಿಂಹ ಸ್ವಾಮಿ, ಹರದನಹಳ್ಳಿ ಶಿವನ ಆಶೀರ್ವಾದ ಪಡೆಯಲು ಬಂದಿದ್ದೇನೆ. ಮಧ್ಯಾಹ್ನ ದೆಹಲಿಗೆ ಹೋಗಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಮಾಯಾವತಿ ಭೇಟಿ ಮಾಡುವೆ. ನನಗೆ ಬೆಂಬಲ ನೀಡಿರುವ ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ಮಾಡುವೆ. ೫ ವರ್ಷ ಸುಭದ್ರ ಆಡಳಿತ ನೀಡಲು ಸಂಕಲ್ಪ ಮಾಡಿದ್ದೇನೆ. ಇದಕ್ಕೆ ಎಲ್ಲರ ಸಹಕಾರ ಬೇಕಿದೆ. ಈ ಬಾರಿ ಸಿಎಂ ಹುದ್ದೆ ನಿಭಾಯಿಸುವುದು ದೊಡ್ಡ ಸವಾಲು ಎಂಬುದು ನನಗೆ ಗೊತ್ತಿದೆ. ಎಲ್ಲರ ಅಭಿಪ್ರಾಯಗಳನ್ನು ನಾನು ಗಮನಿಸುತ್ತಿದ್ದೇನೆ. ಯಾರೂ ನನ್ನನ್ನು ನಿದ್ರೆಗೆಡಿಸಲು ಆಗಲ್ಲವೆಂದು ಹೇಳಿದ್ದಾರೆ.

Next Story

RELATED STORIES