Top

ಅಧಿಕಾರಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಮಾಜಿ ಮೇಯರ್‌

ಅಧಿಕಾರಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಮಾಜಿ ಮೇಯರ್‌
X

ಧಾರವಾಡ : ಜಿಲ್ಲೆಯಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಹಾಗೂ ಮಾಜಿ ಮೇಯರ್ ಶಿವು ಹಿರೇಮಠ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಜಲಮಂಡಳಿ ಕಚೆರಿ ಎದುರು ಪ್ರತಿಭಟನೆ ನಡೆಸಿದ ಅವರು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರ ನಿಮಗೆ ಸಂಬಳ ನೀಡುತ್ತದೆ. ಆದರೆ ನೀವು ಎಸಿ ಕಚೇರಿಯಲ್ಲಿ ಕುಳಿತು ಸಮಯ ಕಳೆಯುತ್ತಿರಿ. ನಿಮಗೆ ಸರಯಾಗಿ ಕೆಲಸ ಮಾಡಲು ಬರೋದಿಲ್ಲ ಅಂತಾ ತರಾಟೆಗೆ ತೆಗೆದುಕೊಂಡರಲ್ಲದೇ ಎಕವಚನದಲ್ಲಿಯೇ ಮಾತನಾಡಿ ಇಂತಹವರನ್ನಿ ಒದ್ದು ಹೊರಹಾಕಿ ಎಂದು ಒತ್ತಾಯ ಮಾಡಿದರು.

ನೀರು ಬರದೇ ಇದ್ದಾಗ ಕರೆ ಮಾಡಿದರೆ ಸರಿಯಾಗಿ ಸ್ಪಂದಿಸುವುದಿಲ್ಲ. ಯುಜಿಡಿ ಕೆಲಸ ಸರಿಯಾಗಿ ಮಾಡಿಲ್ಲ‌. ಎಲ್ಲಿಂದಲೋ ಬಂದು ಇಲ್ಲಿ ಈ ರೀತಿ ವರ್ತಿಸಿದರೆ ಹುಬ್ಬಳ್ಳಿ ಜನ ಹೊರಹಾಕ್ತಾರೆ ಎಂದು ಎಚ್ಚರಿಕೆ ನೀಡಿದರು

Next Story

RELATED STORIES