Top

ಬೂಟಿಗೆ ಸಮಾನ ಎಂದಿದ್ದ ನಲಪಾಡ್​

ಬೂಟಿಗೆ ಸಮಾನ ಎಂದಿದ್ದ ನಲಪಾಡ್​
X

ನಾನು ಯಾರು ಗೊತ್ತಾ? ಈ ಕ್ಷೇತ್ರದ ಎಂಎಲ್ಎ ಮಗ. ನೀವು ನನ್ನ ಶೋ ಸಮಾನ. ನೀನು ತಪ್ಪಾಯ್ತು ಎಂದು ಹೇಳಿ ನನ್ನ ಕಾಲಿಗೆ ಮುತ್ತಿಡು. ಇಲ್ಲವಾದ್ರೆ ನಿನ್ನ ಕೊಲೆ ಮಾಡುತ್ತೇನೆ. ಹೀಗೆ ನಲಪಾಡ್ ವಿದ್ವತ್ಗೆ ಬೆದರಿಕೆ ಹಾಕಿರುವ ಸ್ಪೋಟಕ ಮಾಹತಿ ಬಹಿರಂಗವಾಗಿದೆ.

ಫೆಬವರಿ 17 ರಂದು ಯುಬಿಸಿಟಿಯ ಫರ್ಜಿ ಕೆಫೆ ಬಾರ್ ಮತ್ತು ಯುಬಿ ಸಿಟಿಯ ರೆಸ್ಟೊರೆಂಟ್ ನಲ್ಲಿ ನಡೆದ ಗಲಾಟೆ ವೇಳೆ ಶಾಸಕರ ಪುತ್ರ ಮೊಹಮ್ಮದ್ ನಲಪಾಡ್, ವಿದ್ವತ್ಗೆ ಕ್ಷುಲ್ಲಕ ಕಾರಣ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿ ಪೊಲೀಸರು ಸಲ್ಲಿಸಿದ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ವಿದ್ವತ್ ಗೆ ಮೊದಲು ಹೊಡೆದಿದ್ದು ಅಲ್ಲದೆ ತನ್ನ ಸಹಚರರಿಗೆ ಹಲ್ಲೆ ಮಾಡಲು ನಲಪಾಡ್ ಪ್ರೇರೇಪಿಸಿದ್ದಾನೆ. ಇದು ಕೊಲೆ ಮಾಡುವ ಏಕೈಕ ಉದ್ದೇಶವಾಗಿತ್ತು. ಸಿಸಿಬಿ ಪೊಲೀಸರು ಕೋರ್ಟ್ಗೆ ದೋಷರೋಪಣಯಲ್ಲಿ ಬಹಿರಂಗವಾಗಿದೆ.

ಮೊಹಮ್ಮದ್ ನಲಪಾಡ್ ಕಾಲು ವಿದ್ವತ್ ನ ಬಲಗಾಲಿಗೆ ಮುಟ್ಟಿದಾಗ ಗಲಾಟೆ ಆರಂಭವಾಗಿದೆ. ವಿದ್ವತ್ ಕಾಲಿಗೆ ಗಾಯವಾಗಿತ್ತು ಎಂದು ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಕಲಾಗಿತ್ತು. ವಿದ್ವತ್ ಕಳೆದ ಫೆಬ್ರವರಿ 17ರಂದು ರಾತ್ರಿ 10.30ರ ಸುಮಾರಿಗೆ ಕುಳಿತು ಆಹಾರ ಸೇವಿಸುತ್ತಿದ್ದರು. ನಲಪಾಡ್ ಷಾಂಪೇನ್ ಹಿಡಿದು ಸಂಸದ ಪಿ.ಸಿ.ಮೋಹನ್ ಪುತ್ರ ರಿತಿನ್ ಮೇಲೆ ಹಾಕುವುದಾಗಿ ತಮಾಷೆ ಮಾಡುತ್ತಾನೆ. ಆದ್ರೆ ರಿತಿನ್ ಅಲ್ಲಿಂದ ಓಡಿ ಹೋಗುತ್ತಾನೆ. ಈ ವೇಳೆ ಷಾಂಪೇನ್ ಹಿಡಿದು ನಲಪಾಡ್ ತೆರಳುತ್ತಿದ್ದ ವೇಳೆ ವಿದ್ವತ್ ಕಾಲಿಗೆ ತಗುವುದರಿಂದ ಅಲ್ಲಿಂದ ಜಗಳ ಎಂದು ಪ್ರಮುಖ ಸಾಕ್ಷಿ ರಿತಿನ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

Next Story

RELATED STORIES