Top

ಬಿಜೆಪಿ ಹಿರಿಯ ಮುಖಂಡರಿಗೆ ಚಾಟಿ ಬೀಸಿದ ಜಾವಡೇಕರ್

ಬಿಜೆಪಿ ಹಿರಿಯ ಮುಖಂಡರಿಗೆ ಚಾಟಿ ಬೀಸಿದ ಜಾವಡೇಕರ್
X

ರಾಜ್ಯದಲ್ಲಿ 104 ಸೀಟ್ ಗೆದ್ದುಕೊಂಡರೂ ಸರ್ಕಾರ ರಚಿಸಲು ಸಾಧ್ಯವಾಗದ ಕಾರಣ, ಸೋಲೋಪ್ಪಿಕೊಂಡ ಬಿಜೆಪಿ ಹಿರಿಯ ಮುಖಂಡರಿಗೆ ಪ್ರಕಾಶ್ ಜಾವಡೇಕರ್ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಆಪರೇಷನ್ ಕಮಲ ಮಾಡುವಲ್ಲಿ ಎಡವಿದ ನಾಯಕರಿಗೆ ಜಾವಡೇಕರ್ ಚಾಟಿ ಬೀಸಿದ್ದಾರೆ.ನಿನ್ನೆ ಪಕ್ಷದ ಕಚೇರಿಯಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಜಾವಡೇಕರ್ ಸಿಟ್ಟಾಗಿದ್ದು, ಅನಂತಕುಮಾರ್, ಆರ್.ಅಶೋಕ್, ಡಿ.ವಿ.ಸದಾನಂದಗೌಡ, ಸಿ.ಟಿ.ರವಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇಷ್ಟು ವರ್ಷಗಳಿಂದ ರಾಜಕೀಯದಲ್ಲಿದ್ದೀರಿ ಪ್ರತಿಪಕ್ಷದ ಕೆಲ ಶಾಸಕರನ್ನು ಆಪರೇಷನ್ ಮಾಡಲು ಸಾಧ್ಯವಾಗಲಿಲ್ಲವೇ ನಿಮಗೆ..? ಭರವಸೆ ನೀಡಿ, ಪ್ರಭಾವ ಬೀರಿ ಶಾಸಕರನ್ನು ಸೆಳೆಯಲು ಸಾಧ್ಯವಾಗಲಿಲ್ಲವೇ? ಎಂದು ಪ್ರಶ್ನೆ ಕೇಳುವ ಮೂಲಕ ಬಿಜೆಪಿ ನಾಯಕರಿಗೆ ಮುಜುಗರ ಉಂಟು ಮಾಡಿದ್ದಾರೆ.

Next Story

RELATED STORIES