Top

ನಕಲಿ ವೀಡಿಯೊ ಅಲ್ಲ. ಬೇಕಿದ್ದರೆ ತನಿಖೆಯಾಗಲಿ: ಉಗ್ರಪ್ಪ

ನಕಲಿ ವೀಡಿಯೊ ಅಲ್ಲ. ಬೇಕಿದ್ದರೆ ತನಿಖೆಯಾಗಲಿ: ಉಗ್ರಪ್ಪ
X

ಬೆಂಗಳೂರು: ಬಿಜೆಪಿ ಮುಖಂಡರು ನಮ್ಮ ಶಾಸಕರ ಜೊತೆ ಮಾತನಾಡಿರುವ ಆಡಿಯೋ ಸತ್ಯ ಎಂದು ವಿಧಾನ ಪರಿಷತ್ ಸದಸ್ಯ ಉಗ್ರಪ್ಪ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸತ್ಯಾಸತ್ಯತೆ ಬಗ್ಗೆ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ಆಗಲಿ. ಶಿವರಾಮ್ ಹೆಬ್ಬಾರ್ ಪತ್ನಿ ಜೊತೆ ಬಿ.ಜೆ.ಪುಟ್ಟಸ್ವಾಮಿ ಫೋನ್ ನಲ್ಲಿ ಆಮಿಷ ಒಡ್ಡಿದ್ದು ನಿಜ. ಆದರೆ ಹೆಬ್ಬಾರ್ ಇದನ್ನು ಅಲ್ಲಗಳೆದಿದ್ದಾರೆ. ಆದರೆ ಮಾತನಾಡಿದ್ದು ಬಿಜೆಪಿ ಮುಖಂಡರೇ. ಹೀಗಾಗಿ ನ್ಯಾಯಾಂಗ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ನಾವು ಬಿಡುಗಡೆ ಮಾಡಿದ ಎಲ್ಲವೂ ಅಸಲಿ, ಬಿಸಿ ಪಾಟೀಲ್ ಜೊತೆ ಯಡಿಯೂರಪ್ಪ ಮಾತನಾಡಿದ್ದು ಸತ್ಯ. ಅದನ್ನ ವಿಧಾನಸಭೆಯಲ್ಲಿಯೇ ಯಡಿಯೂರಪ್ಪ ಒಪ್ಪಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Next Story

RELATED STORIES