Top

ಒಂಬತ್ತು ತಿಂಗಳ ಬಾಲಕ ಅಪಹರಣ : ವಾಮಾಚಾರ ಶಂಕೆ

ಒಂಬತ್ತು ತಿಂಗಳ ಬಾಲಕ ಅಪಹರಣ : ವಾಮಾಚಾರ ಶಂಕೆ
X

ಹುಬ್ಬಳ್ಳಿ : ಜಿಲ್ಲೆಯ ತಾರಿಹಾಳದಲ್ಲಿ ದಂಪತಿಗಳ ಒಂಬತ್ತು ತಿಂಗಳ ಮಗುವನ್ನ ಅಪಹರಿಸಿ, ವಾಮಾಚಾರಕ್ಕೆ ಬಳಸಿರುವ ಪ್ರಕರಣ ನಡೆದಿದೆ. ತಾರಿಹಾಳದಲ್ಲಿನ ವಾಜಪೇಯಿ ನಗರದ ನಿವಾಸಿಯಾಗಳಾಗಿದ್ದ ಮಂಜುನಾಥ್ ಮತ್ತು ಸವಿತಾ ದಂಪತಿಗಳ ಮಗ ನವೀನ್ ಕೊಲೆಯಾದ ಮಗುವಾಗಿದೆ.

ಕಳೆದ ಐದಾರು ತಿಂಗಳ ಹಿಂದೆ ತಾರಿಹಾಳದ ವಾಜಪೇಯಿ ನಗರಕ್ಕೆ ಮೂವರು ಆರೋಪಿಗಳು ಬಂದು ನೆಲೆಸಿದ್ದರು. ಈ ಆರೋಪಿಗಳು ಇದ್ದ ಕೇರಿಯ ಹಲವು ಮಕ್ಕಳೊಂದಿದೆ ಸಲುಗೆ ಬೆಳೆಸಿಕೊಂಡಿದ್ದರು. ಇದೇ ಸಲುಗೆಯಿಂದ, ತೀರ ಸಲುಗೆ ಬೆಳೆಸಿದ್ದ ಮಂಜುನಾಥ್ ಮತ್ತು ಸವಿತಾ ದಂಪತಿಗಳ 9 ವರ್ಷದ ಮಗು ನವೀನ್‌ನನ್ನು ಅಪಹರಿಸಿದ್ದಾರೆ. ಅಪಹರಿಸಿದ ನಂತ್ರ, ಹಾವೇರಿ ಜಿಲ್ಲೆಯ ಶಿಗ್ಗಾವಿಗೆ ಕರೆದೊಯ್ದಿದ್ದಾರೆ. ಇಲ್ಲಿಂದ ಪೋಷಕರಿಗೆ ಮಗು ಅಪಹರಿಸಿದ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಹಾವೇರಿಗೆ ತೆರಳಿದರೇ ಅಲ್ಲಿಂದ ಅಪಹರಿಸಿದ ಮಗುವನ್ನು ಬೆಂಗಳೂರಿಗೆ ಕರೆತಂದಿರುವುದಾಗಿ ತಿಳಿಸಿದ್ದಾರೆ. ಮರಳಿ ದಂಪತಿಗಳು ಬೆಂಗಳೂರಿಗೆ ಬಂದು ಮಗುವನ್ನು ನೋಡಿದರೇ ಪೋಷಕರಿಗೆ ಶಾಂಕಿಂಗ್ ಆಗುವ ಸಂಗತಿ ಕಂಡುಬಂದಿದೆ.

9 ವರ್ಷದ ನವೀನ್, ತೀರಾ ಆಸ್ಪಸ್ಥ ಸ್ಥಿತಿಯಲ್ಲಿ ಸಿಕ್ಕಿದೆ. ಅಲ್ಲದೇ ಮಗುವಿನ ತಲೆ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಕೊಯ್ದ ಗುರುತುಗಳು ಕಂಡುಬಂದಿದ್ದಾವೆ. ಈ ಮೂಲಕ ವಾಮಾಚಾರಕ್ಕೆ ಮಗುವನ್ನು ಬಳಸಲಾಗಿದೆ ಎಂಬ ಶಂಕೆ ಪೋಷಕರಲ್ಲಿ ಉಂಟಾಗಿದೆ. ಮಗುವಿನೊಂದಿಗೆ ಸ್ವಗ್ರಾಮಕ್ಕೆ ತೆರಳಿದ ಮಗುವಿನ ದಂಪತಿಗಳು, ಹುಬ್ಬಳ್ಳಿಯ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಮೂಲಕ ಶಂಕಿತ ಆರೋಪಿಗಳನ್ನು ಹಿಡಿಯುವಂತೆ ಒತ್ತಾಯಿಸಿದ್ದಾರೆ.

Next Story

RELATED STORIES