Top

ಮನಗೂಳಿ ಗ್ರಾಮದ ಶೆಡ್‌ನಲ್ಲಿ ವಿವಿ ಪ್ಯಾಟ್ ಮಶೀನ್ ಗಳು ಪತ್ತೆ

ಮನಗೂಳಿ ಗ್ರಾಮದ ಶೆಡ್‌ನಲ್ಲಿ ವಿವಿ ಪ್ಯಾಟ್ ಮಶೀನ್ ಗಳು ಪತ್ತೆ
X

ವಿಜಯಪುರ : ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆ 2018ರ ಮತದಾನಕ್ಕಾಗಿ ಬಳಕೆಯಾದ ವಿವಿ ಪ್ಯಾಟ್‌ಗಳು, ಜಿಲ್ಲೆಯ ಮನಗೂಳಿ ಗ್ರಾಮದ ಶೆಡ್‌ವೊಂದರಲ್ಲಿ ಪತ್ತೆಯಾಗಿವೆ. ಈ ಮೂಲಕ ಚುನಾವಣೆಯಲ್ಲಿ ಅಕ್ರಮ ನಡೆದಿರುವ ಶಂಕೆಯನ್ನು ಹುಟ್ಟು ಹಾಕುವಂತೆ ಮಾಡಿವೆ.

ಜಿಲ್ಲೆಯ ಮನಗೂಳಿ ಗ್ರಾಮದ ಶೆಡ್‌ನಲ್ಲಿ ಒಟ್ಟು 8 ವಿವಿ ಪ್ಯಾಟ್‌ಗಳು ಗಾಗೂ ಬಾಕ್ಸ್‌ಗಳು ಪತ್ತೆಯಾಗಿವೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಶೆಡ್‌ಗಳಲ್ಲೇ ಇಂತಹ ವಿವಿ ಪ್ಯಾಟ್‌ಗಳು ಪತ್ತೆಯಾಗಿದ್ದೂ ಇದೀಗ ಕುತೂಹ ಮೂಡಿಸಿವೆ. ವಿಷಯ ತಿಳಿಯುತ್ತಿದ್ದಂತೆ, ಸಾರ್ವಜನಿಕರು ಸ್ಥಳದಲ್ಲಿ ನೆರೆದ ಪರಿಣಾಮ, ಬಿಗುವಿನ ವಾತಾವರಣ ಉಂಟಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ವಿವಿ ಪ್ಯಾಟ್‌ಗಳನ್ನು ಪರಿಶೀಲನೆ ನಡೆಸಿ, ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಸಾರ್ವಜನಿಕರು ಚುನಾವಣೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

Next Story

RELATED STORIES