Top

ತಿರುಪತಿ ಆಸ್ತಿ ಸುಭದ್ರ : ಆಡಳಿತ ಮಂಡಳಿ ಸ್ಪಷ್ಟನೆ

ತಿರುಪತಿ ಆಸ್ತಿ ಸುಭದ್ರ : ಆಡಳಿತ ಮಂಡಳಿ ಸ್ಪಷ್ಟನೆ
X

ಹೈದರಾಬಾದ್ : ತಿರುಮಲದಲ್ಲಿ ಸ್ವಾಮಿಗೆ ಜರುಗಬೇಕಿದ್ದ ಕೈಂಕರ್ಯಗಳು ಆಗಮ ಶಾಸ್ತ್ರಗಳ ಪ್ರಕಾರವೇ, ಶಾಸ್ತ್ರೋಕ್ತವಾಗಿ ಜರುಗುತ್ತಿದ್ದಾವೆ ಎಂದು ಈ.ಓ.ಅನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಟಿಟಿಡಿ ಈ ಓ ಅನಿಲ್ ಕುಮಾರ್, ಟಿಟಿಡಿಯ ಮಾಜಿ ಅರ್ಚಕ ರಮಣದೀಕ್ಷಿತ್ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ಯಾವುದೇ ಸಮಸ್ಯೆ ಇಲ್ಲದೇ ಸಾಂಗವಾಗಿ ತಿರುಮಲಗಿರಿಯಲ್ಲಿ ಕೈಂಕರ್ಯಗಳು ನಡೆಯುತ್ತಿದೆ. ಯಾವುದೇ ಆಭರಣಗಳು ದೇವಸ್ಥಾನ ಮಂಡಳಿಯಿಂದ ಮಿಸ್ ಆಗಿಲ್ಲ. ಯಾವುದೇ ಕಾನೂನು ಬಾಹಿರವಾಗಿ ನಡೆಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಅಲ್ಲದೇ, ಶ್ರೀವಾರಿಯ ಆಭರಣಗಳು ಭದ್ರವಾಗಿದ್ದಾವೆ. ಟಿಟಿಡಿ ಪ್ರಾರಂಭವಾದಾಗಿನಿಂದ ಇದುವರೆಗಿನ ಎಲ್ಲಾ ಲೆಕ್ಕವನ್ನು ನಿಖರವಾಗಿ ಇಡಲಾಗಿದೆ. ಇದನ್ನು ಸಾರ್ವಜನಿಕರ ಮುಂದೆ ಯಾವುದೇ ಕ್ಷಣದಲ್ಲಿ ಬೇಕಾದರೂ ನಾವು ಇಡಲು ಸಿದ್ದರಿದ್ದೇವೆ ಎಂದು ಹೇಳಿದರು.

ಇನ್ನೂ ದೇವಸ್ಥಾನದ ಅರ್ಚಕರು ಅರವತ್ತೈದು ವಯಸ್ಸು ಮುಗಿದ ಮೇಲೆ ನಿವೃತ್ತರಾಗಬೇಕು ಎಂಬ ನಿಯಮವಿದೆ. ಅದರ ಅನುಸಾರ ರಮಣದೀಕ್ಷಿತ್ ಅವರನ್ನು ನಿವೃತ್ತಿಗೊಳಿಸಲಾಗಿದೆ. ಈ ನಿರ್ಣಯ ನಾನು ತೆಗೆದುಕೊಂಡಿದ್ದಲ್ಲ. ಆಡಳಿತ ಮಂಡಳಿಯ ನಿರ್ಣಯವಾಗಿದೆ ಎಂದರು.

ಅರ್ಚಕ ರಮಣದೀಕ್ಷಿತ್ ಮತ್ತು ಟಿಟಿಡಿ ಆಡಳಿತ ಮಂಡಳಿಯ ಒಳಜಗಳ ಇಲ್ಲಿಗೆ ನಿಲ್ಲುವ ಲಕ್ಷಣ ಕಂಡುಬರುತ್ತಿಲ್ಲ. ಮುಂದೆ ಕೋರ್ಟ್ ಮೆಟ್ಟಿಲು ಏರುವ ಸಾಧ್ಯತೆ ಇದೆ. ಈ ಜಗಳ ಎಲ್ಲಿಗೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Next Story

RELATED STORIES