Top

ಶಿವಣ್ಣನ ದಾಂಪತ್ಯಕ್ಕೆ 32.. `ಓಂ’ಕಾರಕ್ಕೆ 23..!

ಶಿವಣ್ಣನ ದಾಂಪತ್ಯಕ್ಕೆ 32.. `ಓಂ’ಕಾರಕ್ಕೆ 23..!
X

ಟೈಟಲ್ ವಿಚಿತ್ರವಾಗಿದ್ರು ನೀವು ಮುಂದೆ ಓದೋ ಮ್ಯಾಟ್ರನಲ್ಲಿ ಸತ್ವವಿದೆ, ಸ್ವಾರಸ್ಯವಿದೆ. ಸಾಧನೆಯ ಸಾರ್ತಕತೆ ಇದೆ. ಜಾಸ್ತಿ ಪೀಠಿಕೆ ಬೇಡ ಅಂತ ನೇರವಾಗಿ ವಿಷಯಕ್ಕೆ ಬರ್ತಿವಿ. ಮೇಲೆ ನೋಡಿರುವ ಫೋಟೋ ನೋಡಿದ್ರೆ ನಿಮಗ್ಗೆ ಅರ್ಧ ವಿಷಯ ಗೊತ್ತಾಗಿರಬೇಕು. ಆದ್ರೆ ಪೂರ್ತಿ ಪರಿಪೂರ್ಣವಾಗಿ ನಿಮಗ್ಗೆ ಅರ್ಥ ಮಾಡಿಸೋದು ನಮ್ಮ ಧರ್ಮ.

ಸ್ಯಾಂಡಲ್​ವುಡ್ ಎರ್ನಜಿ ಹೌಸ್, ಮಾಸ್ ಲೀಡರ್ , ಸೆಂಚುರಿ ಸ್ಟಾರ್​, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದಂಪತ್ಯ ಜೀವನಕ್ಕೆ 32ರ ಸವಿ ಸಂಭ್ರಮ. ಹೌದು ಗೀತಾ ಶಿವರಾಜ್ ಕುಮಾರ್​ರವನ್ನ ಶಿವರಾಜ್ ಕುಮಾರ್ ಮದುವೆಯಾಗಿ ಬರೋಬ್ಬರಿ 32 ವರ್ಷ. ಈ ಸಮಾಚಾರದಿಂದ ದೊಡ್ಮನೆ ಫ್ಯಾನ್ಸ್​ಗೆ ಹರ್ಷವೋ ಹರ್ಷ. ಶಿವಣ್ಣ ಮತ್ತು ಗೀತಾಕ್ಕ ಚಂದನವನಕ್ಕೆ ಆದರ್ಶ ದಂಪತಿಗಳಿದ್ಹಾಗೆ. ಚಿತ್ರರಂಗದ ಅನೇಕ ಗಣ್ಯತಿ ಗಣ್ಯರು ಈ ಜನುಮದ ಜೋಡಿಗೆ ಶುಭಾಶಯಗಳನ್ನ ತಿಳಿಸಿದ್ದಾರೆ.

ಜನುಮದ ಜೋಡಿಯ ವಿವಾಹ ಮಹೋತ್ಸವದ ಜೊತೆಗೆ ಮತ್ತೊಂದು ಸ್ವೀಟ್ ನ್ಯೂಸ್. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿಡಬಹುದಾದ ‘ಓಂ’ ಸಿನಿಮಾ ತೆರೆಕಂಡು ಬರೋಬ್ಬರಿ 23 ವರ್ಷ. ನಟ ಶಿವರಾಜ್ ಕುಮಾರ್ ಗೀತಾರವರನ್ನ ಮದುವೆಯಾಗಿದ್ದು 19-05-1986. ಸೂಪರ್ ಹಿಟ್ ಸಿನಿಮಾ ‘ಓಂ’ ಸಿನಿಮಾ ಬೆಳ್ಳಿತೆರೆಯಲ್ಲಿ ಚಿತ್ತಾರವಾಗಿದ್ದು 19-05-1995ರಂದು.. ಅಲ್ಲಿಗೆ ಒಂದೇ ದಿನ ಎರಡು ಮಹತ್ತರ ಘಟನೆಗಳು ಕನ್ನಡ ಚಿತ್ರರಂಗದಲ್ಲಿ ಸಂಭವಿಸಿದ್ದು. ಕೇಳೋಕ್ಕೆ ಎಷ್ಟು ಸೋಗಸಾಗಿದೆ ಅಲ್ವಾ..!?

Next Story

RELATED STORIES