Top

ತಮಿಳುನಾಡಿಗೆ ಕಾವೇರಿ ನೀರು ಬಿಡಿ: ರಜನಿಕಾಂತ್​

ತಮಿಳುನಾಡಿಗೆ ಕಾವೇರಿ ನೀರು ಬಿಡಿ: ರಜನಿಕಾಂತ್​
X

ಸುಪ್ರೀಂಕೋರ್ಟ್ ಆದೇಶದಂತೆ ಹೊಸ ಸರಕಾರ ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕು. ಕಾವೇರಿ ನಿರ್ವಹಣಾ ಮಂಡಳಿ ಸೇರಿದಂತೆ ಇತರೆ ತಾಂತ್ರಿಕ ವಿಷಯಗಳ ಬಗ್ಗೆ ಚರ್ಚಿಸುವುದಿಲ್ಲ. ಈ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ ಎಂದು ಬಹುಭಾಷ ನಟ ಹಾಗೂ ರಾಜಕೀಯ ಪ್ರವೇಶಿಸುತ್ತಿರುವ ರಜನಿಕಾಂತ್ ಹೇಳಿದ್ದಾರೆ.

ರಜನಿ ಮಕ್ಕಳ್ ಮಂದರಮ್ ನ ಮಹಿಳಾ ಘಟಕದ ಸದಸ್ಯರೊಂದಿಗೆ ಸಂವಾದ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಜನಿಕಾಂತ್​, ಬಿ.ಎಸ್​.ಯಡಿಯೂರಪ್ಪ ಅವರ ಬಿಜೆಪಿಗೆ ಬಹುಮತದ ಕೊರತೆ ಇದ್ದರೂ ಸರಕಾರ ರಚನೆಗೆ ಆಹ್ವಾನಿಸಿದ್ದು ತಪ್ಪು ಎಂದರು.

ಇದೇ ವೇಳೆ ಬಹುಮತ ಇಲ್ಲದ ಪಕ್ಷಕ್ಕೆ 15 ದಿನ ಕಾಲವಕಾಶ ನೀಡಿದ್ದು ತಪ್ಪು. ಈ ಹಿನ್ನೆಲೆಯಲ್ಲಿ ಮಧ್ಯಪ್ರವೇಶ ಮಾಡಿದ ಸುಪ್ರೀಂಕೋರ್ಟ್​ ನೀಡಿದ ತೀರ್ಪು ಸ್ವಾಗತಾರ್ಹ ಎಂದು ರಜನಿ ಹೇಳಿದರು.

Next Story

RELATED STORIES