ಆರ್ಸಿಬಿ ಪ್ಲೇಆಫ್ ಕಸನು ಭಗ್ನ: ರಾಯಲ್ ಆಸೆ ಜೀವಂತ

X
TV5 Kannada20 May 2018 4:42 AM GMT
ಹೊಡಿಬಡಿ ಆಟಕ್ಕೆ ಮುಂದಾಗಿ ಬ್ಯಾಟ್ಸ್ಮನ್ಗಳು ವಿಕೆಟ್ ಕೈ ಚೆಲ್ಲಿದ್ದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 30 ರನ್ಗಳಿಂದ ಸೋಲುಂಡು ಐಪಿಎಲ್ ಟೂರ್ನಿಯ ಪ್ಲೇಆಫ್ ರೇಸ್ನಿಂದ ಹೊರಬಿದ್ದಿತು. ರಾಜಸ್ಥಾನ್ ರಾಯಲ್ಸ್ ಆಸೆ ಜೀವಂತವಾಗಿದೆ.
ಶನಿವಾರ ನಡೆದ ದಿನದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ರಾಹುಲ್ ತ್ರಿಪಾಠಿ ಅವರ 80 ರನ್ಗಳ ಕೊಡುಗೆಯಿಂದ 20 ಓವರ್ಗಳಲ್ಲಿ 5 ವಿಕೆಟ್ಗೆ 164 ಕಲೆ ಹಾಕಿತು. ಸ್ಪರ್ಧಾತ್ಮಕ ಮೊತ್ತ ಗುರಿ ಬೆಂಬತ್ತಿದ ಆರ್ಸಿಬಿ 19.2 ಓವರ್ಗಳಲ್ಲಿ 134 ರನ್ಗಳಿಗೆ ಪತನಗೊಂಡಿತು.
ಸಂಕ್ಷಿಪ್ತ ಸ್ಕೋರ್
ರಾಜಸ್ಥಾನ್ ರಾಯಲ್ಸ್ 20 ಓವರ್ 5 ವಿಕೆಟ್ 164 (ತ್ರಿಪಾಠಿ 80, ರಹಾನೆ 33, ಕ್ಲಾಸೆನ್ ಅಜೇಯ 32, ಉಮೇಶ್ 25/3).
ಆರ್ಸಿಬಿ 19.2 ಓವರ್ 134 (ಡಿವಿಲಿಯರ್ಸ್ 53, ಪಾರ್ಥಿವ್ 33, ಸೌಥಿ 14, ಸಿರಾಜ್ 14, ಶ್ರೇಯಸ್ ಐಯ್ಯರ್ 16/4, ಲಂಗ್ಲಿನ್ 15/2).
Next Story