Top

ಅಪ್ಪನ ಸಿನಿ ಚಿತ್ರಪಟ ಬಿಡುಗಡೆ ಮಾಡಿದ ಮರಿ ಕ್ರೇಜಿಸ್ಟಾರ್..!

ಅಪ್ಪನ ಸಿನಿ ಚಿತ್ರಪಟ ಬಿಡುಗಡೆ ಮಾಡಿದ ಮರಿ ಕ್ರೇಜಿಸ್ಟಾರ್..!
X

ಸ್ಯಾಂಡಲ್​ವುಡ್ ಕನಸುಗಾರ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಏನು ಮಾಡ್ತಿದ್ದಾರೆ ಅನ್ನೊ ಕುತೂಹಲ ಚಿತ್ರರಸಿಕರಲ್ಲಿ ಕಾಡುತ್ತಿತ್ತು. ಆದ್ರೆ ಆ ಕುತೂಹಲಕ್ಕೆ ಮರಿ ಕ್ರೇಜಿಸ್ಟಾರ್ ಮನೋರಂಜನ್ ತೆರೆ ಎಳೆದಿದ್ದಾರೆ. ‘ಅಪೂರ್ವ’ ಚಿತ್ರದ ನಂತರ ರವಿಮಾಮ ಡೈರೆಕ್ಟರ್ ಚೇರ್​ನಲ್ಲಿ ಕೂತು ಆ್ಯಕ್ಷನ್ ಹೇಳಿರುವ ಚಿತ್ರವೇ ‘ರಾಜೇಂದ್ರ ಪೊನ್ನಪ್ಪ’.. ಈ ಸಿನಿಮಾದ ಶೂಟಿಂಗ್ ಹಾಗೂ ಇನ್ನಿತರ ಕೆಲಸಗಳು ಕಳೆದ ವರ್ಷದಿಂದ ಪ್ರಗತಿಯಲ್ಲಿತ್ತು. ಈಗ ಕೊನೆಗೂ ‘ರಾಜೇಂದ್ರ ಪೊನ್ನಪ್ಪ’ನಿಗೆ ಒಂದು ರೂಪ ಸಿಕ್ಕಿ, ತೆರೆಗೆ ಸಿದ್ದವಾಗಿದೆ.

2014ರಲ್ಲಿ ಖ್ಯಾತ ನಿರ್ದೇಶಕ ಪಿ.ವಾಸು ಕಲ್ಪನೆಯಲ್ಲಿ ಮೂಡಿಬಂದಿದ್ದ ಸೂಪರ್ ಹಿಟ್ ಸಿನಿಮಾ ‘ದೃಶ್ಯ’ ಚಿತ್ರದಲ್ಲಿ ರವಿಚಂದ್ರನ್ ಪಾತ್ರದ ಹೆಸರು ರಾಜೇಂದ್ರ ಪೊನ್ನಪ್ಪ. ಈಗ ಅದೇ ಹೆಸರಿನಲ್ಲಿ ರವಿಚಂದ್ರನ್ ಹೊಸ ಸಿನಿಮಾ ಮಾಡಿದ್ದಾರೆ. ಚಿತ್ರದ ಶೂಟಿಂಗ್ ಕಂಪ್ಲಿಟ್ ಮಾಡಿ ಹೊಸ ಪೋಸ್ಟರ್​ಗಳನ್ನು ತಮ್ಮ ಪುತ್ರನ ಕಡೆಯಿಂದ ಬಿಡುಗಡೆ ಮಾಡಿಸಿದ್ದಾರೆ. ಮನೋರಂಜನ್ ಸೋಷಿಯಲ್ ಮಿಡಿಯದಲ್ಲಿ ‘ಗುಡ್ ಲಕ್ ಡ್ಯಾಡ್’ ಬರೆದು ಪೋಸ್ಟರ್ಸ್ ಗಳನ್ನ ರಿವೀಲ್ ಮಾಡಿದ್ದಾರೆ.

‘ರಾಜೇಂದ್ರ ಪೊನ್ನಪ್ಪ’ ಚಿತ್ರದ ಪೋಸ್ಟರ್ಸ್​ ಒಂದಕ್ಕಿಂಥ ಒಂದು ವಿಭಿನ್ನವಾಗಿದ್ದು ರವಿಚಂದ್ರನ್ ಎನೇ ಮಾಡಿದ್ರು ಡಿಫರೆಂಟ್ ಎಂದು ಸಾರುತ್ತವೆ. ‘ನಾನು ಯಾವತ್ತು ಸೋತ್ತಿಲ್ಲ ; ಗೆದ್ದಿದೀನಿ ಅಥವಾ ಕಲ್ತಿದ್ದೀನಿ’, ನಿನಗೆ ಸರಿ ಅನ್ಸಿದಕ್ಕೆ ನಿಂತ್ಕೊ ಏಕಾಂಗಿ ಆದ್ರೂ ಸರಿ..! ಹೀಗೆ ಖಡಕ್ ಕ್ರೇಜಿ ಲೈನ್ಸ್​​ ‘ರಾಜೇಂದ್ರ ಪೋನ್ನಪ್ಪ’ ಪೋಸ್ಟರ್ಸ್ ಗಳ ಸ್ಪೇಷಲಿಟಿಸ್.

ಈ ಚಿತ್ರದಲ್ಲಿ ಕನಸುಗಾರ ವಕೀಲರ ಪಾತ್ರವನ್ನು ನಿರ್ವಹಿಸಿದ್ದು, ರವಿಚಂದ್ರನ್​ಗೆ ಜೋಡಿಯಾಗಿ ರಾಧಿಕಾ ಕಂಗೋಳಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ‘ರಾಜೇಂದ್ರ ಪೋನ್ನಪ್ಪ’ ಸ್ಯಾಂಡಲ್​ವುಡ್ ಬೆಳ್ಳಿತೆರೆಯಲ್ಲಿ ತನ್ನ ವಕಾಲತ್ ಮಾಡಲಿದ್ದಾನೆ.

Next Story

RELATED STORIES