Top

ಪ್ರಿಯಾ ವಾರಿಯರ್ ಮತ್ತೊಂದು ವೀಡಿಯೊ ವೈರಲ್​

ಪ್ರಿಯಾ ವಾರಿಯರ್ ಮತ್ತೊಂದು ವೀಡಿಯೊ ವೈರಲ್​
X

ಹುಬ್ಬೇರಿಸಿದ ಕೇವಲ 44 ಸೆಕೆಂಡ್ ಟೀಸರ್​​ನಿಂದ ರಾಷ್ಟ್ರಮಟ್ಟದಲ್ಲಿ ಪಡ್ಡೆ ಹೈಕಗಳ ನಿದ್ದೆ ಕದ್ದ ಕೆರಳ ಕುವರಿ ಪ್ರಿಯಾ ಪ್ರಕಾಶ್ ವಾರಿಯರ್ ಮತ್ತೆ ಯುಟ್ಯೂಬ್​ನಲ್ಲಿ ಸಂಚಲನ ಮಾಡುತ್ತಿದ್ದಾರೆ. ಕಣ್ಸನ್ನೆ ಕುವರಿ ನಟಿಸಿರುವ ‘ಓರ್ ಆಡರ್ ಲವ್’ ಚಿತ್ರದ ಮಗದೊಂದು ಕಲರ್​ಫುಲ್ ಸಾಂಗ್ ಬಿಡುಗಡೆಯಾಗಿದೆ. ಈ ಹಾಡಿನಲ್ಲಿಯೂ ಪ್ರಿಯಾ ಮತ್ತು ರೋಷನ್ ಅವರ ಪ್ರೇಮ ಕಹಾನಿ ಮುಂದುವರಿದಿದೆ.

‘ಮಾಣಿಕ್ಯ ಮಲರಾವಿ ಪೂವೆ’ ಹಾಡಿನಲ್ಲಿ ತಮ್ಮ ಕಣ್ಣು ಹೊಡೆದು ಹುಡುಗರ ಎದೆಗೆ ಗುಂಡು ಹೊಡೆದು ರಾತ್ರೋರಾತ್ರಿ ಸ್ಟಾರ್ ಆದ ಪ್ರಿಯಾ ವಾರಿಯರ್ ಅವರ ಈ ಖ್ಯಾತಿಯನ್ನು ಸರಿಯಾಗಿ ಬಳಸಿಕೊಳ್ಳಲು ನಿರ್ಧರಿಸಿದ ‘ಓರ್ ಆಡರ್ ಲವ್’ ಚಿತ್ರತಂಡ ಪ್ರಿಯಾರವರ ಪಾತ್ರವನ್ನು ಹೆಚ್ಚು ಮಾಡಲು ನಿರ್ಧರಿಸಿ ರೀ ಶೂಟ್ ಮಾಡಿತ್ತು. ಈಗ ಓರ್ ಆಡರ್ ಲವ್​ ಚಿತ್ರದ ಶೂಟಿಂಗ್ ಕಂಪ್ಲೀಟ್​ ಆಗಿದೆ. ಚಿತ್ರೀಕರಣ ಮುಕ್ತಾಯವಾದ ಸೂಚಕ ಹೊಸದೊಂದು ಹಾಡನ್ನ ಬಿಡುಗಡೆ ಮಾಡಿದೆ ಚಿತ್ರತಂಡ.

ಸ್ಕೂಲ್ ಕ್ಯಾಂಪಸ್​ನಲ್ಲಿ ನಡೆಯುವ ಹಾಡು ಇದಾಗಿದ್ದು ಬಿಡುಗಡೆಯಾದ ಕೆಲವೇ ಗಂಟೆಯಲ್ಲಿ ಟಾಪ್ ಟ್ರೇಂಡಿಂಗ್​ನಲ್ಲಿದೆ. ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನಿರ್ಮಾಣವಾಗಿರೋ ಈ ಸಿನಿಮಾವನ್ನ ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ , ಸೆಪ್ಟೆಂಬರ್ ತಿಂಗಳು ಬಿಡುಗಡೆ ಮಾಡುವ ಪ್ಲಾನ್​​ನಲ್ಲಿ ಚಿತ್ರತಂಡವಿದೆ. ಒಟ್ಟಿನಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಮೊದಲನೇ ಸಿನಿಮಾದಲ್ಲೇ ಬಿಗ್​ಸ್ಟಾರ್ ನಟಿಯಾಗಿದ್ದಂತು ಸುಳ್ಳಲ್ಲ..

Next Story

RELATED STORIES