Top

ಪ್ಲೇಆಫ್​ಗೆ ಜಿಗಿದ ಕೆಕೆಆರ್​: ಹೈದರಾಬಾದ್​ಗೆ ಮುಖಭಂಗ

ಪ್ಲೇಆಫ್​ಗೆ ಜಿಗಿದ ಕೆಕೆಆರ್​: ಹೈದರಾಬಾದ್​ಗೆ ಮುಖಭಂಗ
X

ಆರಂಭಿಕ ಕ್ರಿಸ್ ಲಿನ್ ಮತ್ತು ರಾಬಿನ್ ಉತಪ್ಪ ಅವರ ಸಮಯೋಚಿತ ಆಟದಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ 5 ವಿಕೆಟ್​ಗಳಿಂದ ಹೈದರಾಬಾದ್ ಸನ್ ರೈಸರ್ಸ್ ತಂಡವನ್ನು ಬಗ್ಗುಬಡಿದು ಐಪಿಎಲ್​ನಲ್ಲಿ ಪ್ಲೇಆಫ್​ ಸುತ್ತು ಪ್ರವೇಶಿಸಿದೆ.

ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ 20 ಓವರ್​ಗಳಲ್ಲಿ 9 ವಿಕೆಟ್​ಗೆ 172 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಗುರಿ ಬೆಂಬತ್ತಿದ ಕೆಕೆಆರ್ 2 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಕೆಕೆಆರ್​ ಪರ ಲಿನ್ 43 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸೇರಿದ 55 ರನ್ ಬಾರಿಸಿ ಔಟಾದರೆ, ಉತ್ತಪ್ಪ 34 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಒಳಗೊಂಡ 45 ರನ್ ಗಳಿಸಿ ತಂಡವನ್ನು ಮುನ್ನಡೆಸಿದರು.

ಸಂಕ್ಷಿಪ್ತ ಸ್ಕೋರ್

ಸನ್​ರೈಸರ್ಸ್ ಹೈದರಾಬಾದ್ 20 ಓವರ್ 9 ವಿಕೆಟ್​ 172 (ಧವನ್ 50, ವಿಲಿಯಮ್ಸನ್ 36, ಗೋಸ್ವಾಮಿ 35, ಪಾಂಡೆ 25, ಪ್ರಸಿದ್ಧ ಕೃಷ್ಣ 30/4).

ಕೋಲ್ಕತಾ ನೈಟ್ ರೈಡರ್ಸ್ 19.4 ಓವರ್ 5 ವಿಕೆಟ್ 173 (ಲಿನ್ 55, ಉತ್ತಪ್ಪ 45, ಕಾರ್ತಿಕ್ ಅಜೇಯ 26, ಬ್ರಾಥ್​ವೇಟ್ 21/2, ಕೌಲ್ 26/2).

Next Story

RELATED STORIES