Top

ದರ್ಶನ್​ ವಿವಾಹ ವಾರ್ಷಿಕೋತ್ಸವಕ್ಕೆ ದುಬಾರಿ ಕಾರು ಉಡುಗೊರೆ

ದರ್ಶನ್​ ವಿವಾಹ ವಾರ್ಷಿಕೋತ್ಸವಕ್ಕೆ ದುಬಾರಿ ಕಾರು ಉಡುಗೊರೆ
X

ನೆನ್ನೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 18ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಈ ಸವಿ ನೆನಪಿಗಾಗಿ ದರ್ಶನ್ ಹೊಸದೊಂದು ಕಾರು ಖರೀದಿಸಿದ್ದಾರೆ. ಕೆಲದಿನಗಳ ಹಿಂದೆ ದುಬಾರಿ ಲೆಂಬೋರ್ಗಿನಿ ಕಾರಿನಲ್ಲಿ ಜಾಲಿ ಡ್ರೈವ್ ಮಾಡಿದ್ದ ದಚ್ಚು, ಈಗ ಮಗದೊಂದು ಅದ್ಧೂರಿ ವಾಹನದಲ್ಲಿ ಹ್ಯಾಪಿ ಜರ್ನಿ ಮಾಡಲಿದ್ದಾರೆ.

ಸದ್ಯ ಬಹುನಿರೀಕ್ಷಿತ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾದ ಶೂಟಿಂಗ್ ಕಂಪ್ಲೀಟ್​ ಮಾಡಿ ‘ಯಜಮಾನ’ ಗೆಟಪ್ ತೊಟ್ಟಿರುವ ದರ್ಶನ್, ಮಗದೊಂದು ಕಾರು ಖರಿದಿಸಿದ್ದಾರೆ. ಹೌದು, ಸ್ಯಾಂಡಲ್​​ವುಡ್​ನ ಡಿ ಬಾಸ್ ಖಾರ್ ಶೆಡ್​​ನಲ್ಲಿ ಹೊಸ ದುಬಾರಿ ಕಾರ್ ಜಾಗ ಪಡೆದಿದೆ. ಆ ಕಾರ್​ನ ಹೆಸರೇ ಫೋರ್ಡ್​ ಮಸ್ಟಿಂಗ್ (ford mustang). ಈ ಲಗ್ಜುರಿ ಕಾರ್​ಗೆ ಬರೋಬ್ಬರಿ 75ಲಕ್ಷ , ಆನ್ ರೋಡ್​ಗೆ ಬರಲು 1ಕೋಟಿ.

ಕಾರ್ ಕ್ರೇಜ್ ಇರುವ ದರ್ಶನ್ ಹೊಸ ಕಾರ್ ಖರಿದಿ ಮಾಡುಲು ಕಾರಣ, ದರ್ಶನ್ ಮತ್ತು ವಿಜಯಲಕ್ಷ್ಮಿ ಪ್ರೇಮವಿವಾಹಕ್ಕೆ 18ನೇ ವಾರ್ಷಿಕೋತ್ಸವ ಎನ್ನಲಾಗುತ್ತಿದೆ. ದಚ್ಚು ಏನೇ ಮಾಡಿದ್ರು ಡಿ ಫ್ಯಾನ್ಸ್​​ ಕ್ಲಬ್​​ಗೆ ಸಂತೋಷ. ಅಂತದ್ರಲ್ಲಿಗ ದರ್ಶನ್ ಹೊಸ ಕಾರು ಖರಿದಿ ಮತ್ತು ವೆಂಡಿಂಗ್ ಆ್ಯನಿವರ್ಸರಿ ಸಮಾಚಾರಗಳು ದಾಸನ ಅಭಿಮಾನಿಗಳಿಗೆ ಸಂತೋಷದ ಅಲೆಯಲ್ಲಿ ತೆಲಾಡುವಂತೆ ಮಾಡಿದೆ.

Next Story

RELATED STORIES