Top

ಅಭ್ಯರ್ಥಿ ಗೆಲುವು, ಅಭಿಮಾನಿಯಿಂದ ದೀರ್ಘದಂಡ ನಮಸ್ಕಾರ

ಅಭ್ಯರ್ಥಿ ಗೆಲುವು, ಅಭಿಮಾನಿಯಿಂದ ದೀರ್ಘದಂಡ ನಮಸ್ಕಾರ
X

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡದಲ್ಲಿ ಅಭಿಮಾನಿಯೊಬ್ಬ ವಿನೂತನ ರೀತಿಯಲ್ಲಿ ಹರಕೆ ತೀರಿಸಿದ್ದಾನೆ. ತನ್ನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಕ್ಕಾಗಿ, ಸುಮಾರು 5 ಕಿಲೋಮೀಟರ್ ದೀರ್ಘದಂಡ ನಮಸ್ಕಾರ ಹಾಕುವ ಮೂಲಕ, ತನ್ನ ಹರಕೆಯನ್ನು ತೀರಿಸಿದ್ದಾನೆ.

ಹೌದು, ನಾಲತವಾಡ ಪಟ್ಟಣದ ರೈತ ಶರಣು ಮಲ್ಲಪ್ಪ ತುಪ್ಪದ ಎಂಬುವರು, ವಿನೂತನ ರೀತಿಯಲ್ಲಿ ಹರಕೆ ತೀರಿಸಿದ್ದಾರೆ. ರೈತ ಶರಣು ಮಲ್ಲಪ್ಪ ತುಪ್ಪದ ತನ್ನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಎ.ಎಸ್.ಪಾಟೀಲ ನಡಹಳ್ಳಿ ನಾಮಪತ್ರ ಸಲ್ಲಿಸುವ ವೇಳೆ, ಗೆದ್ದರೇ ದೀರ್ಘದಂಡ ನಮಸ್ಕಾರ ಹಾಕುವುದಾಗಿ ಹರಕೆ ಹೊತ್ತಿದ್ದರು.

ತಾನು ಹರಕೆ ಹೊತ್ತಂತ್ತೆ, ಬಿಜೆಪಿಯ ಅಭ್ಯರ್ಥಿ ಎ.ಎಸ್.ಪಾಟೀಲ ನಡಹಳ್ಳಿ ಗೆಲುವನ್ನು ಸಾಧಿಸಿದರು. ಈ ಮೂಲಕ ರೈತ ಹೊತ್ತಿದ್ದ ಹರಕೆ ಫಲ ನೀಡಿತು. ಈ ಹರಕೆ ಫಲಿಸಿದ ಪರಿಣಾಮ, ನಾಲತವಾಡ ಪಟ್ಟಣದಿಂದ 5 ಕಿ. ಮೀ. ದೂರದಲ್ಲಿರುವ ಆರೆ ಮಲಯ್ಯ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಹಾಕಿ ಹರಕುವ ಮೂಲಕ ಹರಕೆ ತೀರಿಸಿದರು.

Next Story

RELATED STORIES