Top

ಬಿಎಸ್ ವೈಗಾಗಿ ಅಭಿಮಾನಿಗಳಿಂದ ಪೂಜೆ ಪುನಸ್ಕಾರ

ಬಿಎಸ್ ವೈಗಾಗಿ ಅಭಿಮಾನಿಗಳಿಂದ ಪೂಜೆ ಪುನಸ್ಕಾರ
X

ಇಂದು ನಾಲ್ಕು ಗಂಟೆಗೆ ಬಹುಮತ ಸಾಬೀತುಪಡಿಸದಿದ್ದರೆ ಬಿಎಸ್ ಯಡಿಯೂರಪ್ಪ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಈ ಕಾರಣಕ್ಕಾಗಿ ಬಿಎಸ್ ವೈ ಅಭಿಮಾನಿಗಳು, ಬಹುಮತ ಸಾಬೀತುಪಡಿಸುವಲ್ಲಿ ಸಫಲವಾಗಲಿ ಎಂದು ಪೂಜೆ ಪುನಸ್ಕಾರ ನೆರವೇರಿಸಿದ್ದಾರೆ.

ಕಲಬುರಗಿ: ವೀರಶೈವ ಲಿಂಗಾಯತ ಸಮನ್ವಯ ಸಮಿತಿಯವರು ಕೈ ಕೋರಟಿ ಹನುಮ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ದೇವರಿಗೆ 111 ತೆಂಗಿನಕಾಯಿ ಒಡೆದು ಬಿಎಸ್ ವೈ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂದು ಪ್ರಾರ್ಥಿಸಿದರು.

ತುಮಕೂರು: ಇನ್ನು ತುಮಕೂರಿನಲ್ಲಿ ಬಿಎಸ್ ವೈ ಸಿಎಂ ಸ್ಥಾನ ಉಳಿಯಲಿ ಎಂದು ಯಡಿಯೂರಪ್ಪ ಮನೆದೇವರು, ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಪೂಜೆ ವೇಳೆ ದೇವರಿಗೆ ವಿಶೇಷ ಅಭಿಷೇಕ, ಮಹಾರುದ್ರಯಾಗ, ಸಂಕಲ್ಪ ವೃತಗಳು ನೆರವೇರಿದವು.

ಮೈಸೂರು: ಮೈಸೂರಿನಲ್ಲು ಕೂಡ ಯಡಿಯೂರಪ್ಪ ಅಭಿಮಾನಿಗಳು 1001 ಚಾಮುಂಡಿ ಬೆಟ್ಟವನ್ನು ಹತ್ತುವ ಮೂಲಕ, ಬಿಜೆಪಿ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದರು. ನಾಡಅಧಿದೇವತೆ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದರು.ಅಲ್ಲದೇ ಬಿಎಸ್ ವೈ ಭಾವಚಿತ್ರ ಹಿಡಿದು, ಜಯಘೋಷ ಕೂಗಿದರು.

ಮಂಡ್ಯ: ಜೆಡಿಎಸ್ ಭದ್ರಕೋಟೆ ಎಂದೇ ಕರೆಯಲ್ಪಡುವ ಮಂಡ್ಯ ಜಿಲ್ಲೆಯಲ್ಲೂ ಬಿಜೆಪಿ ಬಹುಮತ ಸಾಬೀತುಪಡಿಸಿಲಿ ಎಂದು ಅಭಿಮಾನಿಗಳು ದೇವರಮೊರೆ ಹೋಗಿದ್ದಾರೆ.ನಗರದ ಕಾಳಿಕಾಂಬ ದೇವಾಲಯದಲ್ಲಿ ಬಿಜೆಪಿ ಕಾರ್ಯಕರ್ತರು ವಿಭಿನ್ನವಾಗಿ ಪೂಜೆ ಸಲ್ಲಿಸಿದ್ದಾರೆ.ಸರ್ಕಾರ ರಚಿಸಲು ಬಿಜೆಪಿಗೆ 112ಶಾಸಕರ ಅವಶ್ಯಕತೆ ಇರುವ ಕಾರಣ, ೧೧೨ ನಿಂಬೆಹಣ್ಣು ಹಾರ,೧೧೨ತೆಂಗಿನಕಾಯಿ,೧೧೨ ಮೆಣಸಿನಕಾಯಿ ಹಾರ,೧೧೨ ಗುಲಾಭಿ ಹಾರ ದೇವಿಗೆ ಅರ್ಪಿಸಲಾಗಿದೆ.ಇಂದು ವಿಧಾನಸೌಧದಲ್ಲಿ ಕಾಳೀಕಾಂಬ ದೇವಿಯೇ ಮ್ಯಾಜಿಕ್ ನಂಬರ್ ಷೋ ಮಾಡಿ ಬಿಜೆಪಿ ಸರ್ಕಾರ ಅಧಿಕಾರ ತರುವಂತೆ ಕಾರ್ಯಕರ್ತರು ದೇವರಲ್ಲಿ ಬೇಡಿಕೊಂಡಿದ್ದಾರೆ.

Next Story

RELATED STORIES