Top

ಪ್ರತಾಪ್​ ಜೇಬಿನಲ್ಲಿ ಬಿತ್ತು ವಿಪ್: ಡಿಕೆಶಿ ಚಾಣಕ್ಷ ನಡೆ

ಪ್ರತಾಪ್​ ಜೇಬಿನಲ್ಲಿ ಬಿತ್ತು ವಿಪ್: ಡಿಕೆಶಿ ಚಾಣಕ್ಷ ನಡೆ
X

ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ತಾನೊಬ್ಬ ಚಾಣಕ್ಷ ರಾಜಕಾರಣಿ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಕೈಕೊಡಲಿದ್ದ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರ ಜೇಬಿನಲ್ಲಿ ಚಾಣಕ್ಷತನದಿಂದ ವಿಪ್​ ಇಟ್ಟು ಸೆಳೆಯುವಲ್ಲಿ ಯಶಸ್ವಿಯಾದರು.

ಶನಿವಾರ ಮಧ್ಯಾಹ್ನ ಖಾಸಗಿ ಹೋಟೆಲ್​ನಲ್ಲಿ ಅಡಗಿ ಕುಳಿತಿದ್ದ ಪ್ರತಾಪ್ ಗೌಡ ಪೊಲೀಸ್ ಭದ್ರತೆಯೊಂದಿಗೆ ಆಗಮಿಸಿದರು. ಪ್ರತಾಪ್ ಗೌಡ ಆಗಮನದ ಸುಳಿವು ಪಡೆದಿದ್ದ ಡಿ.ಕೆ.ಶಿವಕುಮಾರ್, ದೂರವಾಣಿಯಲ್ಲಿ ಮಾತನಾಡುವಂತೆ ನಟಿಸುತ್ತಾ ಕೈಯಲ್ಲಿ ವಿಪ್ ಹಿಡಿದು ನಿಂತಿದ್ದರು. ಪ್ರತಾಪ್ ಬರುತ್ತಿದ್ದಂತೆ ಹಸ್ತಲಾಘವ ನೀಡಿ ಮಾತನಾಡಿಸುವಂತೆ ನಟಿಸಿ ಜೇಬಿನಲಲ್ಇ ವಿಪ್ ಇರಿಸಿದರು.

ಪ್ರತಾಪ್ ಗೌಡ ಅನಿವಾರ್ಯವಾಗಿ ಕಾಂಗ್ರೆಸ್ ಜೊತೆ ಕೈ ಜೋಡಿಸಬೇಕಾಯಿತು. ನಂತರ ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಕುಳಿತು ಭೋಜನ ಸವಿದರು.

ಇದೇ ವೇಳೆ ಬಿಜೆಪಿ ಶಾಸಕ ಎಚ್​.ಆರ್. ವಿಶ್ವನಾಥ್, ಪ್ರತಾಪ್ ಅವರನ್ನು ಸೆಳೆಯಲು ಯತ್ನಿಸಿದರು. ಅದರಲ್ಲೂ ಪಡಸಾಲೆಯಲ್ಲಿ ಎಳೆಯಲು ಹೋದಾಗ ಅವರಿಂದ ಬಿಡಿಸಿಕೊಂಡು ಕಾಂಗ್ರೆಸ್ ನಾಯಕರೊಂದಿಗೆ ಉಳಿದುಕೊಂಡರು.

Next Story

RELATED STORIES