Top

ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ ನೇಮಕ: ಕಾಂಗ್ರೆಸ್ ಅರ್ಜಿ ವಜಾ

ಹಂಗಾಮಿ ಸ್ಪೀಕರ್ ಆಗಿ ಕೆ.ಜಿ. ಬೋಪಯ್ಯ ಅವರ ನೇಮಕ ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಕಾಂಗ್ರೆಸ್​-ಜೆಡಿಎಸ್ ಅರ್ಜಿಯನ್ನು ಸುಪ್ರೀಂಕೋರ್ಟ್​ ವಜಾಗೊಳಿಸಿದೆ.

ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಸ್ಪೀಕರ್ ಆಗಿದ್ದ ಬೋಪಯ್ಯ ಅವರು ಸಂವಿಧಾನ ನಿಯಮಾವಳಿಯನ್ನು ಗಾಳಿಗೆ ತೂರಿ ಬಿಜೆಪಿಗೆ ಬಹುಮತ ಲಭಿಸುವಂತೆ ಮಾಡಿ ಹೈಕೋರ್ಟ್​ನಿಂದ ಛಿಮಾರಿಗೆ ಒಳಗಾಗಿದ್ದನ್ನು ಕಾಂಗ್ರೆಸ್ ಪರ ವಕೀಲರು ಪ್ರಸ್ತಾಪಿಸಿದರು.

ಈ ಸಮಯದಲ್ಲಿ ಬೋಪಯ್ಯ ನೇಮಕ ಪ್ರಶ್ನಿಸಿ ನೋಟಿಸ್ ಜಾರಿ ಮಾಡಬೇಕಾಗುತ್ತದೆ. ಆಗ ಬಹುಮತ ಸಾಬೀತು ಪ್ರಕ್ರಿಯೆ ಮುಂದೂಡಬೇಕಾಗುತ್ತದೆ. ಇದರಿಂದ ಸುಪ್ರೀಂಕೋರ್ಟ್​ ಈ ಹಿಂದೆ ನೀಡಿದ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ. ಆದ್ದರಿಂದ ಬೋಪಯ್ಯ ಅವರ ನೇಮಕಕ್ಕೆ ಅಡ್ಡಿಪಡಿಸಲು ಸಾಧ್ಯವಿಲ್ಲ. ಆದರೆ ಕಲಾಪ ಹಾಗೂ ಬಹುಮತ ಸಾಬೀತು ಪ್ರಕ್ರಿಯೆಯ ಮೇಲೆ ನಿಗಾ ವಹಿಸಲಾಗುವುದು ಎಂದು ಕೋರ್ಟ್ ಹೇಳಿತು.

Next Story

RELATED STORIES