Top

ಕುದುರೆ ವ್ಯಾಪಾರ ಮಾಡಿಲ್ಲ, ಹಾಗಾಗಿ ಸೋತೆವು: ಜಾವ್ಡೆಕರ್​

ಕುದುರೆ ವ್ಯಾಪಾರ ಮಾಡಿಲ್ಲ, ಹಾಗಾಗಿ ಸೋತೆವು: ಜಾವ್ಡೆಕರ್​
X

ಕುದುರೆ ವ್ಯಾಪಾರ ನಾವು ಮಾಡಲಿಲ್ಲ. ಹಾಗಾಗಿಯೇ ನಾವು ಬಹುಮತ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಯಡಿಯೂರಪ್ಪ ಅವರು ರಾಜೀನಾಮೆ ನೀಡಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದಿದ್ದಾರೆ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೆಕರ್ ಹೇಳಿದ್ದಾರೆ.

ಬಿ.ಎಸ್​.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಕುದುರೆ ವ್ಯಾಪಾರ ಮಾಡಿಲ್ಲ. ಕಾಂಗ್ರೆಸ್ ಬಿಡುಗಡೆ ಮಾಡಿದ ಆಡೀಯೋಗಳು ಫೇಕ್​ ಎಂದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಉಳಿಸಿದೆ ಎಂದು ಹೇಳಿಕೆ ನೀಡಿರುವುದು ಹಾಸ್ಯಸ್ಪದ. ಕೇವಲ 7-8 ಸೀಟು ಕೊರತೆ ಇದ್ದರೂ ರಾಜೀನಾಮೆ ನೀಡಿ ನಾವು ನಿಜವಾಗಿಯೂ ಪ್ರಜಾಪ್ರಭುತ್ವ ಉಳಿಸಿದ್ದೇವೆ ಎಂದು ಜಾವ್ಡೆಕರ್ ಹೇಳಿದರು.

Next Story

RELATED STORIES