ರಾಯಲ್ ಎನ್ ಫೀಲ್ಡ್ ಬೈಕ್ ಕದಿಯಲು ಯತ್ನ

X
TV5 Kannada19 May 2018 5:02 AM GMT
ಕಾರವಾರದಲ್ಲಿ ಚಾಲಾಕಿ ಕಳ್ಳನೊಬ್ಬ ಬೈಕ್ ಕಳ್ಳತನ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಕಳ್ಳತನ ಮಾಡಿದ ವಿಡಿಯೋ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರವಾರದ ಮಾಹಾಲಕ್ಷಿ ಹೋಮ್ ಅಪ್ಲೈಯನ್ಸ್ ಮಾಲೀಕ ರಾಜೇಶ್ ಕಾಮತ್ ಎಂಬುವರ ರಾಯಲ್ ಎನ್ಪಿಲ್ಡ್ ಬೈಕ್ ಕಳ್ಳತನಕ್ಕೆ ಪ್ರಯತ್ನಿಸಿದ ಘಟನೆ ನಡೆದಿದೆ. ಯಾರೂ ಇಲ್ಲದ ಸಮಯವನ್ನ ನೋಡಿಕೊಂಡ ಬೈಕ್ ಕಳ್ಳನೊಬ್ಬ ಬೈಕ್ ಲಾಕ್ ಮುರಿದು ಬೈಕ್ ಆನ್ ಆಗದೆ ಬರಿಗೈಲಿ ಹೋಗಿದ್ದಾನೆ. ಈ ಚಾಲಾಕಿ ಕಳ್ಳನ ಕೈ ಚಳಕದ ದೃಶ್ಯ ಮಹಾಲಕ್ಷ್ಮಿ ಶೋ ರೂಂ ಮುಂಬಾಗದ ಸಿಸಿ ಟಿವಿಲಿ ಸೇರೆಯಾಗಿದೆ. ಶೋ ರೂಂ ಮಾಲಿಕರು ಸಿಸಿಟಿವಿ ಪುಟೇಜ್ ನೋಡಿದ ನಂತರ ಬೈಕ್ ಕದಿಯಲು ಪ್ರಯತ್ನಿಸಿದ್ದಾನೆ ಎಂಬುವುದು ಗೊತ್ತಾಗಿದೆ. ಈ ಹಿಂದೆ ಇಲ್ಲಿ ಇನೊಂದು ಬೈಕ್ ಕಳ್ಳತನವಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಇದು ಅದೇ ಕಳ್ಳನದೆ ಕೆಲಸ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಕಾರವಾರ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಕಳ್ಳನಿಗಾಗಿ ಬಲೆ ಬಿಸಿದ್ದಾರೆ.
Next Story