Top

ಮಿಶ್ರಾ, ಹರ್ಷಲ್​ ದಾಳಿಗೆ ಸೋತ ಸೂಪರ್ ಕಿಂಗ್ಸ್

ಮಿಶ್ರಾ, ಹರ್ಷಲ್​ ದಾಳಿಗೆ ಸೋತ ಸೂಪರ್ ಕಿಂಗ್ಸ್
X

ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೊನೆಯ ಸ್ಥಾನಕ್ಕೆ ಕುಸಿದಿರುವ ಡೆಲ್ಲಿ ಡೇರ್ ಡೆವಿಲ್ಸ್ ತಂಡ 34 ರನ್​ಗಳ ಭಾರೀ ಅಂತರದಿಂದ ಬಗ್ಗುಬಡಿದಿದೆ.

ಶುಕ್ರವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ 20 ಓವರ್​ಗಳಲ್ಲಿ 5 ವಿಕೆಟ್​ಗೆ 162 ರನ್ ಸಂಪಾದಿಸಿತು. ಸಾಧಾರಣ ಗುರಿ ಬೆಂಬತ್ತಿದ ಚೆನ್ನೈ 20 ಓವರ್​ಗಳಲ್ಲಿ 6 ವಿಕೆಟ್​ಗೆ 128 ರನ್ ಗಳಿಸಲಷ್ಟೇ ಶಕ್ತವಾಯಿತು.

ಡೆಲ್ಲಿ ಪರ ಹರ್ಷಲ್ ಪಟೇಲ್ ಮತ್ತು ಅಮಿತ್ ಮಿಶ್ರಾ ಬಿಗುವಿನ ದಾಳಿ ಸಂಘಟಿಸಿದ್ದೂ ಅಲ್ಲದೇ ತಲಾ 2 ವಿಕೆಟ್ ಪಡೆದು ಚೆನ್ನೈ ಗೆಲುವಿಗೆ ಅಡ್ಡಿಯಾದರು. ಹರ್ಷಲ್ ಪಟೇಲ್ 16 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್ಸೇರಿದ 36 ರನ್ ಸಿಡಿಸಿದರು.

ಸಂಕ್ಷಿಪ್ತ ಸ್ಕೋರ್

ಡೆಲ್ಲಿ ಡೇರ್ ಡೆವಿಲ್ಸ್ 20 ಓವರ್ 5 ವಿಕೆಟ್​ 162 (ರಿಷಭ್ 38, ಶಂಕರ್ 36, ಹರ್ಷಲ್ ಅಜೇಯ 36, ನೆಗ್ಡಿ 14/2).

ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ 6 ವಿಕೆಟ್​ 128 (ರಾಯುಡು 50, ಜಡೇಜಾ 27, ಬೌಲ್ಟ್​ 20/2, ಮಿಶ್ರಾ 20/2).

Next Story

RELATED STORIES