Top

ಬಿ.ಸಿ.ಪಾಟೀಲ್​ಗೆ ಆಮೀಷ ಒಡ್ಡಿ ಸಿಕ್ಕಿ ಬಿದ್ದ ಬಿಎಸ್​ವೈ

ಬಿ.ಸಿ.ಪಾಟೀಲ್​ಗೆ ಆಮೀಷ ಒಡ್ಡಿ ಸಿಕ್ಕಿ ಬಿದ್ದ ಬಿಎಸ್​ವೈ
X

ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ್​ಗೆ ಕರೆ ಮಾಡಿ ಆಮೀಷ ಒಡ್ಡಿದ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ಆಡಿಯೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.

ಆಡಿಯೋ ಕ್ಲಿಪ್ ಮತ್ತು ವಿವರ ಇಲ್ಲಿದೆ.

ಬಿಎಸ್ ವೈ ಆಪ್ತ (ಬಿ.ಸಿ. ಪಾಟೀಲರಿಗೆ): ಸಾರ್ ಒಂದುನಿಮಿಷ ಸಾಹೇಬರು ಮಾತನಾಡುತ್ತಾರೆ.

ಬಿಎಸ್ ವೈ: ಹಲೋ…ಹಲೋ..

ಬಿ.ಸಿ.ಪಾಟೀಲ್: ಅಣ್ಣಾ ಕಂಗ್ರಾಜುಲೇಶನ್ … ಹೇಳಿ… ನಮಸ್ಕಾರ...

ಬಿಎಸ್ ವೈ: ಹಲೋ… ಹಲೋ…ಎಲ್ಲಿದ್ದೀಯಪ್ಪಾ…?

ಬಿ.ಸಿ. ಪಾಟೀಲ್: ಅಣ್ಣಾ ನಾವು ಕೊಚ್ಚಿನ್ ಗೆ ಹೋಗುತ್ತಿದ್ದೇವೆ…. ಕೊಚ್ಚಿನ್ ಗೆ ಹೋಗುತ್ತಿದ್ದೇವೆ…ಬಸ್ ನಲ್ಲಿದ್ದೇನೆ.

ಬಿಎಸ್ ವೈ: ಹೋಗಬಾರದಿತ್ತು..! ಬಾರಯ್ಯ ನೀನು…ನಿನಗೇನು ಹೆಲ್ಪ್ ಬೇಕೋ ಮಾಡುತ್ತೇನೆ! ಮಂತ್ರಿಯಾಗುವಂತೆ ಬಾ… ನಿನಗೇನು ಬೇಕೋ ಅದನ್ನು ಮಾಡುತ್ತೇನೆ.

ಬಿ.ಸಿ. ಪಾಟೀಲ್: ಆಯಿತು ಅಣ್ಣಾ…ನೀವು ಮೊದಲೇ ಒಂದೂ ಚೂರು ಹೇಳಿದ್ದರೇ…

ಬಿ.ಎಸ್. ವೈ: ಟೈಮ್ ಕರೆಕ್ಟಾಗಿ ತಾನೇ ಹೇಳಬೇಕು!

ಬಿ.ಸಿ. ಪಾಟೀಲ್: ಹೌದು…

ಬಿ.ಎಸ್. ವೈ: ನೀನು ಹೋಗಬೇಡ… ಬಂದು ಬಿಡು…

ಬಿ.ಸಿ. ಪಾಟೀಲ್: ಬಸ್ ನಲ್ಲಿ ಇದೀವಿ ಈಗ..

ಬಿ.ಎಸ್. ವೈ: ಮನೆವ್ರು… ಏನಾದರು ಒಂದು ಕಾರಣ ಹೇಳಿಕೊಂಡು ವಾಪಾಸ್ ಬಾ!

ಬಿ.ಸಿ. ಪಾಟೀಲ್: ನನ್ನ ಪೊಸಿಶನ್ ಏನ್ ಅಂತಾ?

ಬಿ.ಎಸ್. ವೈ: ಯು ವಿಲ್ ಬಿಕಂ ದ ಮಿನಿಸ್ಟರ್ ದಟ್ಸ್ ಆಲ್!

ಬಿ.ಸಿ. ಪಾಟೀಲ್: ಓ.ಕೆ. ಓ.ಕೆ. ಅಣ್ಣಾ… ನನ್ನ ಜತೆ ಇಬ್ಬರು ಮೂವರು ಇದ್ದಾರೆ!

ಬಿ.ಎಸ್. ವೈ: ನನ್ನ ಮೇಲೆ ವಿಶ್ವಾಸವಿದೆ ತಾನೇ…? ಕರೆದು ಕೊಂಡು ಬಾ…!

ಬಿ.ಸಿ. ಪಾಟೀಲ್ : ಖಂಡಿತ… ಖಂಡಿತ…!

ಬಿ.ಎಸ್. ವೈ: ಹಾಗಾದರೆ ಹೋಗ ಕೂಡದು ನೀನು ವಾಪಾಸ್ ಬಾ…!

ಬಿ.ಸಿ. ಪಾಟೀಲ್ : ಆಯ್ತಣ್ಣಾ…ಆಯ್ತಣ್ಣಾ…!

ಬಿ.ಎಸ್. ವೈ: ಒಂದು ಸಾರ್ತಿ ನೀನು ಕೊಚ್ಚಿನ್ ಗೆ ಹೋದರೆ ನೀನು ಸಿಗಲ್ಲ. ಅದು ಸಿಗದೇ ಇರುವ ವಿಷಯ

ಬಿ.ಸಿ. ಪಾಟೀಲ್: ಆಯ್ತಣ್ಣಾ… ಆಯ್ತಣ್ಣಾ…

ಬಿ.ಎಸ್. ವೈ: ಈಗೇನು ಮಾಡ್ತೀಯಾ… ಹೇಳು!

ಬಿ.ಸಿ. ಪಾಟೀಲ್: ತಾವು ಈಗ ಹೇಳಿದ್ದೀರಿ… ನಾನು ಐದು ನಿಮಿಷದಲ್ಲಿ ಹೇಳ್ತೀನೀ ಅಣ್ಣಾ…!

ಬಿ.ಎಸ್. ವೈ: ಶ್ರೀರಾಮುಲುಗೆ ಫೋನ್ ಮಾಡಿ ಹೇಳು…!

ಬಿ.ಸಿ. ಪಾಟೀಲ್: ಆಯ್ತಣ್ಣಾ… ಆಯ್ತಣ್ಣಾ….!!

Next Story

RELATED STORIES