Top

ಇಲ್ಲಿ ವ್ಯಕ್ತಿ ಪೂಜೆ ನಡಿತಿದೆ- ಹಿರಿಯನಟ ಅನಂತ್ ನಾಗ್ ಅಸಮಾಧಾನ

ಇಲ್ಲಿ ವ್ಯಕ್ತಿ ಪೂಜೆ ನಡಿತಿದೆ- ಹಿರಿಯನಟ ಅನಂತ್ ನಾಗ್ ಅಸಮಾಧಾನ
X

ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ಎಷ್ಟರ ಮಟ್ಟಿಗೆ ಸಂಚಲನ ಮೂಡಿದೆ ಎಂದರೆ, ರಾಷ್ಟ್ರೀಯ ಮಾಧ್ಯಮಗಳಲ್ಲೂ ಕೂಡ ಕರ್ನಾಟಕದ ಸಿಎಂ ಯಾರಾಗುತ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ.ಇದೀಗ ಕನ್ನಡ ಚಿತ್ರರಂಗದ ಗಣ್ಯರು ಕೂಡ ರಾಜಕೀಯದ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಕಾವೇರಿ ನದಿ ವಿವಾದದ ಬಗ್ಗೆ ಮಾತನಾಡಿದ ಹಿರಿಯ ನಮಟ ಅನಂತ್ ನಾಗ್ ಇದೀಗ ರಾಜ್ಯ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣಿಗಳ ಈ ನಡೆ- ನುಡಿ ನೋಡಿದ್ರೆ ನಮಗಿನ್ನು ಪ್ರಜಾಪ್ರಭುತ್ವ ಬಂದಿಲ್ಲ ಅನಿಸುತ್ತೆ, ಇಲ್ಲಿ ವ್ಯಕ್ತಿ ಪೂಜೆ ನಡಿತಿದೆ. ಆಯ್ಕೆ‌ ಆದ ಶಾಸಕರು ಪ್ರಜೆಗಳಿಂದ ಅಧಿಕಾರಕ್ಕೆ ಬಂದಿರೊದನ್ನ‌ ಮರೆತಿದ್ದಾರೆ. ಆಗಿನ ಕಾಲ ಹಾಗಿತ್ತು ಈಗಿನ ಕಾಲ ಹೀಗಿದ, ಕಾಲಕ್ಕೆ ತಕ್ಕಂತೆ ಎಲ್ಲ ಬದಲಾಗಬೇಕಿದೆ..ಮುಂದಿನ ನಡೆ ಏನಾಗುತ್ತೆ ಅನ್ನೊದನ್ನ ಕಾದು ನೋಡಬೇಕು ಎಂದಿದ್ದಾರೆ.

Next Story

RELATED STORIES