Top

‘ಅರವಿಂದ ಸಮೇತ’ ಫಸ್ಟ್ ಲುಕ್ ರಿಲೀಸ್

‘ಅರವಿಂದ ಸಮೇತ’ ಫಸ್ಟ್ ಲುಕ್ ರಿಲೀಸ್
X

ಟಾಲಿವುಡ್ ಯಂಗ್ ಟೈಗರ್ ಎನ್​ಟಿಆರ್, ಮಾತಿನ ಮಾಂತ್ರಿಕ ತ್ರಿವಿಕ್ರಮ್ ಶ್ರೀನಿವಾಸ್ ಕ್ರೇಜಿ ಕಾಂಬಿನೇಷನ್ ಸಿನಿಮಾ ಟೈಟಲ್ ಫೈನಲ್ ಆಗಿದೆ. ಜ್ಯೂನಿಯರ್ ಎನ್​ಟಿಆರ್ ಬರ್ತ್​ ಡೇ ಸ್ಪೆಷಲ್ಲಾಗಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್​ ಜೊತೆಗೆ ಚಿತ್ರತಂಡ ಟೈಟಲ್ ಅನೌನ್ಸ್ ಮಾಡಿದೆ. ಪೋಸ್ಟರ್​ನಲ್ಲಿ ತಾರಕ್ ಸಿಕ್ಸ್​ ಪ್ಯಾಕ್​​ ಅವತಾರ ಕಂಡು ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ.

ಜಲ್ಸಾ, ಅತ್ತಾರಿಂಟಿಕಿ ದಾರೇದಿ, ಜುಲಾಯಿ ರೀತಿಯ ಬ್ಲಾಕ್ ಬಸ್ಟರ್ ಸಿನಿಮಾಗಳ ಸರದಾರ ತ್ರಿವಿಕ್ರಮ್​​ ಇದೇ ಮೊದಲ ಬಾರಿಗೆ ತಾರಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಈ ಬಾರಿ ಅರವಿಂದ ಸಮೇತ ವೀರ ರಾಘವ ಅನ್ನೋ ವಿಭಿನ್ನ ಟೈಟಲ್​ನಲ್ಲಿ ಸಿನಿಮಾ ಮಾಡ್ತಿದ್ದು, ಈಗಾಗಲೇ ಶೂಟಿಂಗ್ ಭರದಿಂದ ಸಾಗಿದೆ. ಪೋಸ್ಟರ್​​ನಲ್ಲಿ ಯಂಗ್ ಟೈಗರ್ ರಗಡ್ ಲುಕ್ ಸಿನಿಮಾ ಬಗ್ಗೆ ಭರವಸೆ ಮೂಡಿಸಿದೆ. ನಾಳೆ ಎನ್​ಟಿಆರ್​ಗೆ ಹುಟ್ಟುಹಬ್ಬ. ಹಾಗಾಗಿ ಒಂದು ದಿನ ಮೊದಲೇ ಅಭಿಮಾನಿಗಳಿಗೆ ಅರವಿಂದ ಸಮೇತ ಫಸ್ಟ್​ ಲುಕ್ ಗಿಫ್ಟ್ ಕೊಟ್ಟಿದೆ ಚಿತ್ರತಂಡ.

ಈ ಹಿಂದೆ ಅಜ್ಞಾತವಾಸಿ ಸಿನಿಮಾ ನಿರ್ಮಿಸಿದ್ದ ಎಸ್.ರಾಧಾ ಕೃಷ್ಣ, ಹಾರಿಕ ಅಂಡ್ ಹಾಸಿನಿ ಕ್ರಿಯೇಷನ್ಸ್ ಬ್ಯಾನರ್​ನಲ್ಲಿ ಅರವಿಂದ ಸಮೇತ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ. ಟೆಂಪರ್, ನಾನಕು ಪ್ರೇಮತೋ, ಜನತಾ ಗ್ಯಾರೇಜ್, ಜೈ ಲವ ಕುಶ ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಕಮಾಲ್ ಮಾಡ್ತಿರೋ ತಾರಕ್ ಅರವಿಂದ ಸಮೇತ ವೀರ ರಾಘವ ಆಗಿ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷಾಂತ್ಯಕ್ಕೆ ಈ ಕ್ರೇಜಿ ಕಾಂಬಿನೇಷನ್​ ಸಿನಿಮಾ ತೆರೆಗೆ ಬರಲಿದೆ.

Next Story

RELATED STORIES