Top

Exclusive : ಶಾಸಕ ಬಸನಗೌಡರಿಗೆ ರೆಡ್ಡಿ ಆಮೀಷ : ಆಡಿಯೋ ಬಿಡುಗಡೆ ಮಾಡಿದ ಕೈ

Exclusive : ಶಾಸಕ ಬಸನಗೌಡರಿಗೆ ರೆಡ್ಡಿ ಆಮೀಷ : ಆಡಿಯೋ ಬಿಡುಗಡೆ ಮಾಡಿದ ಕೈ
X

ಬೆಂಗಳೂರು : ರಾಯಚೂರು ಗ್ರಾಮೀಣ ಶಾಸಕ ಕಾಂಗ್ರೆಸ್​ನ ಬಸನಗೌಡ ಅವರಿಗೆ ಜನಾರ್ದನ ರೆಡ್ಡಿ ಕರೆ ಮಾಡಿ ಆಮೀಷ ಒಡ್ಡಿರುವ ಆಡೀಯೋವನ್ನು ಕಾಂಗ್ರೆಸ್ ವಿಧಾನಸಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಬಿಡುಗಡೆ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಉಗ್ರಪ್ಪ ಆಡೀಯೋ ಬಿಡುಗಡೆ ಮಾಡಿದರು. ಬಸನಗೌಡ ಅವರಿಗೆ ಕರೆ ಮಾಡಿದ ಜನಾರ್ದನ ರೆಡ್ಡಿ, ನಿಮಗೆ ಒಳ್ಳೆಯ ಸಮಯ ಬಂದಿದೆ. ನೀವು ನಮ್ಮ ಜೊತೆ ಬನ್ನಿ. ಈಗ ನಿಮ್ಮ ಬಳಿ ಎಷ್ಟು ಆಸ್ತಿ ಇದೆಯೋ ಅದರ 100 ಪಟ್ಟು ಹೆಚ್ಚು ಮಾಡ್ಕೊಬಹುದು. ಬೇಕಾದರೆ ರಾಷ್ಟ್ರೀಯ ಅಧ್ಯಕ್ಷರ ಜೊತೆ ಒನ್​ ಟು ಒನ್ ಕೂರಿಸ್ತೀನಿ ಎಂದಿದ್ದಾರೆ.

[audio mp3="http://tv5kannada.com/wp-content/uploads/2018/05/Gali-Janardhan-Audio.mp3"][/audio]

ಆ ಸಂಭಾಷಣೆಯ ಸಾರಾಂಶ ಈ ಕೆಳಗಿನಂತಿದೆ....

ಜನಾರ್ಧನ ರೆಡ್ಡಿ ಪಿಎ : ಹಲೋ.., ಹಲೋ.., ಬಸನಗೌಡ್ರೇ, ಪ್ರೀ ಇದ್ದಾರಾ.? ಜನಾರ್ಧನ ರೆಡ್ಡಿ ಸಾಹೇಬ್ರು ಮಾತಾಡಬೇಕಂತೆ.?

ಬಸನಗೌಡ : ಹೇಳ್ರಿ.. ಹೇಳ್ರಿ..

ಜನಾರ್ಧನ ರೆಡ್ಡಿ ಪಿಎ : ಕೊಡ್ಲಾ ಸರ್‌ಗೆ..?

ಬಸನಗೌಡ : ಕೊಡಿ.. ಕೊಡಿ..

ಜನಾರ್ಧನ ರೆಡ್ಡಿ : ಹು ಬಸವನಗೌಡ..?

ಬಸನಗೌಡ : ಹೌದು, ಹೇಳ್ರಿ ಸರ್...

ಜನಾರ್ಧನರೆಡ್ಡಿ : ಪ್ರೀಯಾಗಿದ್ದಿಯೇನಾ.?

ಬಸನಗೌಡ : ಹು ಪ್ರೀ ಆಗಿದ್ದೀನಿ ಹೇಳ್ರಿ ಸರ್.!

ಜನಾರ್ಧನರೆಡ್ಡಿ : ಏನಿಲ್ಲ ಮಗ, ಏನಿದ್ರೂ ಕೂಡ, ಹಳೆಯದನ್ನು ನೆನೆಸಿಕೊಂಡ್ರೂ, ಏನೇನ್ ಕೆಟ್ಟಗಳಿಗೆಗಳು ಆಗಿದ್ಯೋ, ಅದನ್ನೆಲ್ಲಾ ಮರೆತು ಹೋಗಿ ಬಿಡು. ನಾ ನಿನಗೆ ಅರ್ಧ ರಾತ್ರಿಯಲ್ಲಿ ಹೇಳುತ್ತಾ ಇದ್ದೇನೆ. ನನ್ನ ಟೈಂಮು ಚೆನ್ನಾಗಿ ಶುರುವಾಗಿದೆ. ಮತ್ತು ನಿನ್ನ ಹತ್ತಿರ ನೇರವಾಗಿ ದೊಡ್ಡವರು, ರಾಷ್ಟ್ರೀಯ ಅಧ್ಯಕ್ಷರು ಕುಳಿತುಕೊಂಡು ಮಾತನಾಡುತ್ತಾರೆ.

ಬಸನಗೌಡ : ಹು

ಜನಾರ್ಧನ ರೆಡ್ಡಿ : ನಿನಗೇನು ಬೇಕು ಅನ್ನೋದನ್ನು ಒಂಟುವನ್ ಮಾತನಾಡಿ, ಆಮೇಲೆನೇ ನಾವು ಮುಂದಿನ ಹೆಜ್ಜೆ ಇಡೋಣ.

ಬಸನಗೌಡ : ಇಲ್ಲ ಇಲ್ಲ ಸರ್.. ಯಾಕೆಂದ್ರೆ.., ಒಳ್ಳೆ ಲಾಸ್ಟ್ ಪರಿಸ್ಥಿತಿಯಲ್ಲಿ ಕೆಳಗೆ ಬಂದಾಗ ಅವರು ಹಿಡಿದು ಮಾಡಿದ್ದಾರೆ.

ಜನಾರ್ಧನ ರೆಡ್ಡಿ : ನಾನು ನಿನಗೆ ಒಂದೇ ಒಂದು ಪಾಯಿಂಟ್ ಹೇಳುತ್ತೇನೆ.

ಬಸನಗೌಡ : ಹು

ಜನಾರ್ಧನ ರೆಡ್ಡಿ : ನೋಡಿಮಾ ಬಿಎಸ್‌ಆರ್ ಟೈಂನಲ್ಲಿ, ತುಂಬಾ ಕೆಟ್ಟಗಳಿಗೆಯಲ್ಲಿ, ಫ್ಯಾಮಿಲಿ ಪಾರ್ಟಿ ಮಾಡಿದ್ದು. ಮತ್ತು ತುಂಬಾ ವಿರೋಧವಾಗಿದ್ದ ವಾತಾವರಣದಲ್ಲಿ ಮಾಡಿದ್ದು. ಹೀಗೆಲ್ಲಾ ನಂಬಿಕೊಂಡು, ಆಸೆಗಳನ್ನು ಕಳೆದುಕೊಂಡಿದ್ದೀರಿ ಅನ್ನೋದ್ರಲ್ಲಿ ಎರಡು ಮಾತಿಲ್ಲ. ನಾನು ಹೇಳುತ್ತಾ ಇದ್ದೇನೆ. ನೀನು ಅದಕ್ಕಿಂತ ನೂರರಷ್ಟು ಬೆಳೆಯುವಂತೆ. ಈಗ ಅವನು ಶಿವನಗೌಡ ನಾಯಕ್, ಅವತ್ತು ಏನ್ ನನ್ನ ಮಾತು ಕೇಳಿ ಬಂದು ಮಂತ್ರಿಯೇ ಎಲ್ಲಾ ಉದ್ದರ ಆಗಿದ್ದು. ಇವತ್ತು ನಿಮಗೆ ತನ್ನ ಮನಸ್ಸಿಗೆ ತಾನು, ಸಾಯೋವರೆಗು ಎಂ ಎಲ್ ಆಗೋವಷ್ಟು ದುಡಿದುಕೊಂಡು. ಶಕ್ತಿವಂತನಾಗಿದ್ದಾನೋ ಇಲ್ವೋ.? ನನ್ನಿಂದನೇ ಎಲ್ಲಾ ಆಗಿದ್ದು.

ಬಸನಗೌಡ : ಹೌದು ಸರ್..

ಜನಾರ್ಧನ ರೆಡ್ಡಿ : ಏನು ರಾಜೀವ್ ಗೌಡ ನನ್ನಿಂದಲೇ ಎಲ್ಲಾ ಆಗಿದ್ದು.

ಬಸನಗೌಡ : ಹೌದು...

ಜನಾರ್ಧನ ರೆಡ್ಡಿ : ಅರ್ಥ ಆಯ್ತಲ್ಲಾ.? ಏನ್ ಅಂದ್ರೆ, ನಿನ್ನ ವಿಚಾರ ನಮ್ಮ ಬ್ಯಾಡ್ ಟೈಂನಲ್ಲಿ ಮ್ಯಾಚ್ ಆಗಲಿಲ್ಲ. ಬಟ್ ಇವತ್ತು ಏನ್ ಅಂದ್ರೇ, ಶಿವನಗೌಡ ಗೆದ್ದು ಪ್ರಯೋಜನ ಆಗ್ಲಿಲ್ಲ. ಇವತ್ತು ನೀನ್ ಮಂತ್ರಿ ಆಗ್ತೀಯಾ.

ಬಸನಗೌಡ : ಹೌದು...

ಜನಾರ್ಧನ ರೆಡ್ಡಿ : ಅರ್ಥ ಆಯ್ತಾ.? ನಾನು ಇನ್ನೋಂದು ಏನ್ ಅಂದ್ರೇ, ನಾವು ನೇರವಾಗಿ ದೊಡ್ಡರೋ ಹತ್ತಿರ ಒನ್ ಟು ವನ್ ನೇರವಾಗಿ ಕೂರಿಸಿ, ನಾನೇ ಸ್ವತಹ ಮಾತಾಡಿಸುತ್ತೇನೆ. ಮತ್ತು ಈ ದೇಶದಲ್ಲಿ ಇವತ್ತು ಅವರೇನು ಆಡಳಿತ ಮಾಡುತ್ತಾ ಇದ್ದಾರೆ. ಆ ಮಾತು ನೆಡೆಸಿಕೊಂಡು ಹೋಗುವವರಂತಾಗಿರುತ್ತಾರೆ. ನಾನೇಳೋದು ನೀನೇನು ಈಗ ಆಸ್ತಿ ಗೀಸ್ತಿ ಮಾಡಿಕೊಂಡಿದ್ದೀಯಲ್ಲಾ. ಅದಕ್ಕಿಂತ ನೂರರಷ್ಟು ನೀನು ಮಾಡಿಕೊಳ್ಳುತ್ತೀಯ ಬಸನಗೌಡ. ನೂರರಷ್ಟು ಮಾಡಿಕೊಳ್ಳುತ್ತೀಯಾ..!

ಬಸನಗೌಡ : ಇಲ್ಲ ಸರ್.. ಸಾರಿ ಸರ್.. ಏಕೆಂದರೆ ನನಗೀಗ ಒಳ್ಳೆಯ ಲಾಸ್ಟ್ ಪರಿಸ್ಥಿತಿ ಒಳಗೆ ಇವತ್ತು, ನನ್ನ ಕರೆದುಕೊಂಡು ಹೋಗಿ ಟಿಕೆಟ್ ಕೊಡಿಸಿ, ಎಲೆಕ್ಷನ್ ಅವರೇ ಮಾಡಿದ್ದಾರೆ. ಇಂತಹ ಪರಿಸ್ಥಿತಿಯೊಳಗೆ ಅವರಿಗೆ ದ್ರೋಹ ಮಾಡೋದು ಅರ್ಥ ಇಲ್ಲ. ಹಂಗಾಗಿ, ಏಕೆಂದರೇ ನಿಮ್ಮ ಬಗ್ಗೆ ಗೌರವವಿದೆ, ಅಭಿಮಾನವಿದೆ...

ಎಂದು ಈ ಮೂಲಕ ಸಂಭಾಷಣೆ ಅಂತ್ಯಗೊಳ್ಳುತ್ತದೆ.

ಈ ಆಡಿಯೋ ಬಿಡುಗಡೆ ಮಾಡಿದ ನಂತರ ಮಾತನಾಡಿದ ಉಗ್ರಪ್ಪ, ನಿನ್ನೆಯವರೆಗೂ ಶಾಸಕರಿಗೆ 25 ಕೋಟಿ ಆಫರ್ ಮಾಡುತ್ತಿದ್ದ ಬಿಜೆಪಿ ಮುಖಂಡರು ಇದೀಗ 150 ಕೋಟಿ ವರೆಗೂ ಆಮೀಷ ಒಡ್ಡುತ್ತಿದ್ದಾರೆ.

Next Story

RELATED STORIES