Top

ರಾಜ್ಯಪಾಲರ ನಡೆ ಸಮರ್ಥಿಸಿಕೊಂಡ ಸಂತೋಷ್ ಹೆಗ್ಡೆ

ರಾಜ್ಯಪಾಲರ ನಡೆ ಸಮರ್ಥಿಸಿಕೊಂಡ ಸಂತೋಷ್ ಹೆಗ್ಡೆ
X

ಮೈಸೂರು : ಇವತ್ತಿನ ಈ ಪರಿಸ್ಥಿತಿಗೆ ಮತದಾರರೇ ಕಾರಣರೆಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾಳೆಯೇ ಬಹುಮತ ಸಾಬೀತೂ ಮಾಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶ ಸ್ವಾಗತಾರ್ಹ. ಇದು ಕುದುರೆ ವ್ಯಾಪಾರವನ್ನು ತಪ್ಪಿಸುವುದಕ್ಕೆ ಸಹಕಾರಿಯಾಗಲಿದೆ. ರಾಜ್ಯಪಾಲರು ಬಿಜೆಪಿಯನ್ನು ಮೊದಲು ಸರ್ಕಾರ ರಚನೆಗೆ ಆಹ್ವಾನಿಸಿದ್ದು ಸರಿ. ಇದರಲ್ಲಿ ಯಾವ ತಪ್ಪು ಇಲ್ಲ ಎಂದು ರಾಜ್ಯಪಾಲರ ಕ್ರಮವನ್ನು ಸಮರ್ಥಿಸಿಕೊಂಡರು.

ಇನ್ನೂ, ಬಹುಮತ ಸಾಬೀತಿಗೆ 15 ದಿನ ಕಾಲವಕಾಶ ನೀಡಿದ್ದು ತಪ್ಪು. ಇದನ್ನ ಈಗ ಸುಪ್ರೀಂಕೋರ್ಟ್ ಸರಿಪಡಿಸಿದೆ. ಶಾಸಕರ ರೆರ್ಸಾರ್ಟ್ ರಾಜಕೀಯ ಮಾಡಿದರೆ ಮಾಡಲಿ. ರೆಸಾರ್ಟ್ನವರಿಗೆ ಒಂದಿಷ್ಟು ದುಡ್ಡಾದ್ರು ಆಗುತ್ತದೆ. ಅಲ್ಲದೇ, ಇವತ್ತಿನ ಈ ರಾಜಕೀಯಕ್ಕೆ ಮತದಾರರೇ ಮೂಲ ಕಾರಣ. ಜಾತಿಗಾಗಿ, ಹಣಕ್ಕಾಗಿ ಮತ ಹಾಕಿರುವ ಪರಿಣಾಮ ಈ ರೀತಿ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಸಂತೋಷ್ ಹೆಗಡೆ ಹೇಳಿಕೆ ಅಸಮಾಧಾನ ವ್ಯಕಪಡಿಸಿದರು.

Next Story

RELATED STORIES