Top

ಹಂಗಾಮಿ ಸ್ಪೀಕರ್ ಆಗಿ ಕೆ.ಜಿ.ಬೋಪಯ್ಯ ಪ್ರಮಾಣವಚನ

ಹಂಗಾಮಿ ಸ್ಪೀಕರ್ ಆಗಿ ಕೆ.ಜಿ.ಬೋಪಯ್ಯ ಪ್ರಮಾಣವಚನ
X

ಬೆಂಗಳೂರು : ಸುಪ್ರೀಂ ಕೋರ್ಟ್ ನಾಳೆ ಬಹುಮತ ಸಾಬೀತುಪಡಿಸಲು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ 4 ಗಂಟೆ ಡೆಡ್‌ಲೈನ್ ನೀಡಿದೆ. ಈ ಹಿನ್ನಲೆಯಲ್ಲಿ ಇಂದು ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಬಿಜೆಪಿಯ ಹಿರಿಯ ನಾಯಕ ಕೆ.ಜಿ.ಬೋಪಯ್ಯ, ರಾಜ್ಯಪಾಲ ವಜುಬಾಯ್ ವಾಲಾ ನೇಮಕಮಾಡಿದ್ದಾರೆ.

ಇಂದು ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿರುವ ಬಿಜೆಪಿಯ ಹಿರಿಯ ನಾಯಕ, ಕೆ.ಜಿ.ಬೋಪಯ್ಯಗೆ, ರಾಜ್ಯಪಾಲರಾದ ವಜುಬಾಯ್ ವಾಲ, ಪ್ರತಿಜ್ಞಾವಿಧಿ ಬೋಧಿಸಿದರು. ಈ ಮೂಲಕ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಕೆ.ಜಿ.ಬೋಪಯ್ಯ ಪ್ರಮಾಣವಚನ ಸ್ವೀಕರಿಸಿದರು.

ಅಂದಹಾಗೇ, ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿರು ಬಿಜೆಪಿಯ ಕೆ.ಜಿ.ಬೋಪಯ್ಯ ನಾಳೆ ಒಂದು ದಿನವಷ್ಟೇ ಬಹುಮತ ಸಾಬೀತುಪಡಿಸುವ ಸಲುವಾಗಿ ಹಂಗಾಮಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇಂತಹ ಸ್ಪೀಕರ್ ಈ ಹಿಂದೆ ತಾವು ಬಿಜೆಪಿ ಅಧಿಕಾರಾವಧಿಯಲ್ಲಿ ಸ್ಪೀಕರ್ ಆಗಿದ್ದಾಗ ಜೆಡಿಎಸ್‌ನ ರೆಬಲ್ ಶಾಸಕರನ್ನು ಅನರ್ಹಗೊಳಿಸಿದ್ದರು. ಇಂತಹ ಸ್ಪೀಕರ್ ಅವರನ್ನು ಬಿಜೆಪಿ ಮತ್ತೆ ಇದೀಗ ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿದೆ. ಈ ಮೂಲಕ ಮೂವರು ರೆಬಲ್ ಶಾಸಕರನ್ನು ಬಚಾವು ಮಾಡುವ ತಂತ್ರಗಾರಿಕೆಯನ್ನು ಅನುಸರಿಸುತ್ತಿದೆಯೇ ಎಂಬ ಅನುಮಾನಕ್ಕೂ ಎಡೆಮಾಡಿಕೊಟ್ಟಿದೆ.

Next Story

RELATED STORIES