Top

ಹೈದರಾಬಾದ್​ನಲ್ಲೂ ಪದೇಪದೆ ರೆಸಾರ್ಟ್ ಬದಲಿಸಿದ ಶಾಸಕರು

ಹೈದರಾಬಾದ್​ನಲ್ಲೂ ಪದೇಪದೆ ರೆಸಾರ್ಟ್ ಬದಲಿಸಿದ ಶಾಸಕರು
X

ಕಾಂಗ್ರೆಸ್, ಜೆಡಿಎಸ್ ಶಾಸಕರು ರಾತ್ರಿಯೀಡಿ ಬಸ್​ನಲ್ಲಿ ಪ್ರಯಾಣ ಮಾಡಿದ ನಂತರ ಹೈದರಾಬಾದ್​ಗೆ ತೆರಳಿದ್ದು, ಪದೇಪದೆ ರೆಸಾರ್ಟ್​ ಬದಲಿಸುತ್ತಿದ್ದಾರೆ.

ಗುರುವಾರ ರಾತ್ರಿಯವರೆಗೂ ಬಿಡದಿಯ ಈಗಲ್ಟನ್​ ರೆಸಾರ್ಟ್ ನಲ್ಲಿ ತಂಗಿದ್ದ ಕಾಂಗ್ರೆಸ್ ಶಾಸಕರು ಹಾಗೂ ಶಾಂಗ್ರಿಲಾ ಹೋಟೆಲ್​ನಲ್ಲಿ ತಂಗಿದ್ದ ಜೆಡಿಎಸ್ ಶಾಸಕರು ರಾತ್ರೋ ರಾತ್ರಿ ಮೂರು ಬಸ್​ಗಳಲ್ಲಿ ಹೈದರಾಬಾದ್​ಗೆ ಪ್ರಯಾಣ ಬೆಳೆಸಿದರು.

ತಾವು ಕೊಚ್ಚಿನ ಗೆ ಹೋಗುತ್ತಿದ್ದೇವೆ ಎನ್ನುವ ಮೂಲಕ ಎಲ್ಲರ ಚಿತ್ತ ಬೇರೆಡೆ ಸೆಳೆಯಲು ಯತ್ನಿಸಿದ ಶಾಸಕರು ಕೊನೆಗೂ ಹೈದರಾಬಾದ್​ಗೆ ಪ್ರಯಾಣಿಸಿದರು. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಹ್ವಾನದ ಮೇರೆಗೆ ಶಾಸಕರು ಹೈದರಾಬಾದ್​ಗೆ ತೆರಳಿದ್ದರು.

ಮೊದಲು ಬಂಜಾರಾ ಹೀಲ್ಸ್ ನ ಪಾರ್ಕ್ ಹಯಾತ್ ರೆಸಾರ್ಟ್ ನಲ್ಲಿ ತಂಗಿದ್ದ ಶಾಸಕರು, ನಂತರ ತಾಜ್ ಕೃಷ್ಣಾ ಹೋಟೇಲ್ ಗೆ ಸ್ಥಳಾಂತರಗೊಂಡಿದ್ದಾರೆ. ನಂತರ ಹೈದರಾಬಾದ್​ನಿಂದಲೂ ಹೊರಟು ಬೇರೆ ರೆಸಾರ್ಟ್​ ಬದಲಿಸಲು ಚಿಂತನೆ ನಡೆಸಿದ್ದಾರೆ.

Next Story

RELATED STORIES