Top

ಸುಪ್ರೀಂಕೋರ್ಟ್ ಶಾಕ್ ಗೆ ಕಕ್ಕಾಬಿಕ್ಕಿಯಾದ ಬಿಜೆಪಿ

ಸುಪ್ರೀಂಕೋರ್ಟ್ ಶಾಕ್ ಗೆ ಕಕ್ಕಾಬಿಕ್ಕಿಯಾದ ಬಿಜೆಪಿ
X

ಬೆಂಗಳೂರು: ನಾಳೆ 4ಗಂಟೆಗೆ ಬಹುಮತ ಸಾಬೀತುಪಡಿಸಬೇಕು ಇಲ್ಲದಿದ್ದರೆ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ಬಿಜೆಪಿ ನಾಯಕರು ಕಕ್ಕಾಬಿಕ್ಕಿಯಾಗಿದ್ದಾರೆ. ಬಹುಮತ ಸಾಬೀತು ಪಡಿಸುವುದು ಹೇಗೆ ಎಂಬ ಟೆನ್ಶನ್ ಒಂದೆಡೆ ಇದ್ದರೆ, ಇನ್ನೊಂದೆಡೆ ಬಹುಮತ ಸಾಬೀತು ಮಾಡುವ ವಿಶ್ವಾಸ ಹೊಂದಿದ್ದಾರೆ ಬಿಜೆಪಿ ನಾಯಕರು.

ಈ ಬಗ್ಗೆ ಹೇಳಿಕೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ ಸದನದಲ್ಲಿ ಬಹುಮತ ಸಾಬೀತು ಪಡೆಯುತ್ತೇವೆ. ಸುಪ್ರೀಂಕೋರ್ಟ್ ಆದೇಶ ಪಾಲಿಸುತ್ತೇವೆ ಎಂದಿದ್ದಾರೆ.

ಈ ಬಗ್ಗೆ ಸದಾನಂದಗೌಡ ಹೇಳಿಕೆ ನೀಡಿದ್ದು, ಇನ್ನು ಕೂಡ ಫೈನಲ್ ತೀರ್ಪು ಹೊರಬಂದಿಲ್ಲ ಬಿಡಿ, ಒಂದು ವೇಳೆ ನಾಳೆ ಬಹುಮತ ಸಾಬೀತು ಪಡೆಸಿಬೇಕು ಅಂತಾ ಹೇಳಿದ್ರೂ ಕೂಡ ನಾವು ಸಾಬೀತುಪಡಿಸಲೇಬೇಕು. ಸುಪ್ರೀಂಕೋರ್ಟ್ ತೀರ್ಪು ಪಾಲಿಸಲೇಬೇಕು. ಮುಂದಿನ ತೀರ್ಮಾನವನ್ನು ಎಲ್ಲ ನಾಯಕರು ಚರ್ಚೆ ಮಾಡಲಿದ್ದೇವೆ. ನಾನೊಬ್ಬನೇ ನಿರ್ಧಾರ ಹೇಳೋದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.

ಇನ್ನೊಂದೆಡೆ ಬಹುಮತ ಸಾಬೀತಿನ ಬಗ್ಗೆ ಹೇಳಿಕೆ ನೀಡಿದ ಅಶ್ವಥ್ ನಾರಾಯಣ್ ಸುಪ್ರೀಂಕೋರ್ಟ್ ಹೇಳಿಕೆೆಗೆ ನಾವು ಬದ್ಧರಾಗಿದ್ದೇವೆ. ಸುಪ್ರೀಂಕೋರ್ಟ್ ಸಮಯಕ್ಕೆ ತಯಾರಾಗಿದ್ದೇವೆ. ಫ್ಲೋರ್ ಟೆಸ್ಟ್ ನಂತರ ಕಾದುನೋಡಿ ಎಂದಿದ್ದಾರೆ. ಅಲ್ಲದೇ ಯಾರೂ ಎಲ್ಲೇ ಹೋದ್ರು ವಿಧಾನಸೌಧಕ್ಕೆ ಬರಬೇಕು.ರೆಸಾರ್ಟ್ ನಲ್ಲಿ ಕೂತ್ಕೊಂಡು ಪ್ಲೋರ್ ಟೆಸ್ಟ್ ಕೊಡೋಕ್ಕೆ ಆಗಲ್ಲ. ಬರಲೇಬೇಕು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ ಕೂಡ ಹೇಳಿಕೆ ನೀಡಿದ್ದು, ನಾಳೆ 4ಗಂಟೆಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಬಿಜೆಪಿ ಇದನ್ನ ಸ್ವಾಗತ ಮಾಡುತ್ತೆ. ಬಹುಮತ ಸಾಬೀತು ಪಡಿಸುವ ವಿಶ್ವಾಸವಿದೆ. ಹಲವಾರು ಜನ ನಮ್ಮ ಸಂಪರ್ಕದಲ್ಲಿದ್ದಾರೆ.120ಕ್ಕೂ ಹೆಚ್ಚು ಜನ ಶಾಸಕರು ಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ನಾಳೆ ನಾವು ಬಹುಮತ ಪಡೆದು ಅಧಿಕಾರ ಸ್ವೀಕರಿಸಿ ಅಧಿಕಾರ ಹಿಡಿಯುತ್ತೇವೆ ಎಂದು ಹೇಳಿದ್ದಾರೆ.

Next Story

RELATED STORIES