Top

ವೆಂಕಟೇಶ್ವರನ ದರ್ಶನ ಪಡೆದ ಹೆಚ್.ಡಿ.ದೇವೇಗೌಡರು

ವೆಂಕಟೇಶ್ವರನ ದರ್ಶನ ಪಡೆದ ಹೆಚ್.ಡಿ.ದೇವೇಗೌಡರು
X

ತಿರುಪತಿ: ಇಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹುಟ್ಟುಹಬ್ಬವಿರುವ ಹಿನ್ನೆಲೆ, ಕುಟುಂಬ ಸದಸ್ಯರೊಂದಿಗೆ ಹೆಚ್ಡಿಡಿ ತಿರುಪತಿಗೆ ಭೇಟಿ ನೀಡಿದ್ದರು. ನಿನ್ನೆ ಸಂಜೆಯೇ ಬೆಂಗಳೂರಿನಿಂದ ಹೊರಟಿದ್ದ ಹೆಚ್ಡಿಡಿ, ತಿರುಪತಿಗೆ ಭೇಟಿ ನೀಡಿ, ಶೀನಿವಾಸನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಸದ್ಯ ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಉಂಟಾದ ಹಿನ್ನೆಲೆ, ಪಕ್ಷದ ಗೆಲುವಿಗಾಗಿ, ಜೆಡಿಎಸ್ ಅಧಿಕಾರಕ್ಕೆ ಬರಲೆಂದು ಪೂಜೆ ಸಲ್ಲಿಸಿದ್ದೀರಾ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಹೆಚ್ಡಿಡಿ, ಹಾಗೆಲ್ಲ ಏನಿಲ್ಲ, ಪ್ರತಿವರ್ಷವೂ ನನ್ನ ಹುಟ್ಟುಹಬ್ಬಕ್ಕೆ ನಾನು ಕುಟುಂಬ ಸದಸ್ಯರ ಜೊತೆಗೆ ತಿರುಪತಿಗೆ ಬಂದು ಶ್ರೀನಿವಾಸನಿಗೆ ವಿಶೇಷ ಪೂಜೆ ಸಲ್ಲಿಸುತ್ತೇನೆ ಎಂದು ಹೇಳಿದರು.

Next Story

RELATED STORIES