Top

ಬಿಜೆಪಿ ಕುದುರೆ ವ್ಯಾಪಾರದ ರೆಕಾರ್ಡಿಂಗ್ ಬಿಡುಗಡೆ: ಸಿದ್ದು ಗುದ್ದು

ಶಾಸಕ ಆನಂದ್ ಸಿಂಗ್ ಅವರನ್ನು ಬಿಜೆಪಿಯವರು ಐಟಿ, ಇಡಿ ದಾಳಿ ಬೆದರಿಕೆ ಒಡ್ಡಿ ಅಪಹರಿಸಿ ಕೂಡಿಡಲಾಗಿದೆ. ಬಿಜೆಪಿಯವರು ಇನ್ನೂ ಸಾಕಷ್ಟು ಮಂದಿಗೆ ಕರೆ ಮಾಡಿ ಕುದುರೆ ವ್ಯಾಪಾರಕ್ಕೆ ಮುಂದಾಗಿರುವ ಆಡೀಯೋ ರೆಕಾರ್ಡಿಂಗ್ ನಮ್ಮ ಬಳಿ ಇದೆ. ಅದನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಂಬ್ ಸಿಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನಂದ್ ಸಿಂಗ್ ಅವರನ್ನು ಅಪಹರಿಸಿ ಕೂಡಿಡಲಾಗಿದೆ. ಆದರೆ ಅವರು ವಿಧಾನಸೌಧಕ್ಕೆ ಬರುವ ವಿಶ್ವಾಸವಿದೆ. ಬಂದರೆ ನಮ್ಮ ಪಕ್ಷಕ್ಕೆ ಬೆಂಬಲಕ್ಕೆ ನೀಡಲಿದ್ದಾರೆ ಎಂದರು.

ಕಾಂಗ್ರೆಸ್ ಮತ್ತು ಜೆಡಿಎಸ್​ನ ಶಾಸಕರನ್ನು ಸೆಳೆಯಲು ಬಿಜೆಪಿ ಮುಖಂಡರು ಆಮೀಷ ಒಡ್ಡುತ್ತಿದ್ದಾರೆ. ನಮ್ಮ ಶಾಸಕರೊಂದಿಗೆ ಮೊಬೈಲ್​ನಲ್ಲಿ ಮಾತನಾಡಿದ ರೆಕಾರ್ಡಿಂಗ್ ನಮ್ಮ ಬಳಿ ಇದೆ. ಅದನ್ನು ಬಿಡುಗಡೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಇದೇ ವೇಳೆ ಸುಪ್ರೀಂಕೋರ್ಟ್​ ನಾಳೆ ಬಹುಮತ ಸಾಬೀತಿಗೆ ನೀಡಿದ ಆದೇಶವನ್ನು ಸ್ವಾಗತಿಸಿದ್ದು, ನಾವು ಬಹುಮತ ಪರೀಕ್ಷೆಯಲ್ಲಿ ಜಯ ಗಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Next Story

RELATED STORIES