Top

ಬಿಜೆಪಿಯಿಂದ ಆಫರ್​: ಫೇಸ್​ಬುಕ್​ನಲ್ಲಿ ಬಹಿರಂಗಪಡಿಸಿದ ವಿಶ್ವನಾಥ್ ಪುತ್ರ

ಬಿಜೆಪಿಯಿಂದ ಆಫರ್​: ಫೇಸ್​ಬುಕ್​ನಲ್ಲಿ ಬಹಿರಂಗಪಡಿಸಿದ ವಿಶ್ವನಾಥ್ ಪುತ್ರ
X

ಬಹುಮತ ಸಾಬೀತುಪಡಿಸಲು ಅನ್ಯ ಪಕ್ಷಗಳ ಶಾಸಕರನ್ನು ಬಿಜೆಪಿ ಸೆಳೆಯುವ ಪ್ರಯತ್ನ ಮಾಡುತ್ತಿರುವ ಬಗ್ಗೆ ಹುಣಸೂರು ಶಾಸಕ ಹೆಚ್.ವಿಶ್ವನಾಥ್‌ ಪುತ್ರ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.

ಕುದುರೆ ವ್ಯಾಪಾರಕ್ಕೆ ಮುಂದಾಗಿರುವ ಬಿಜೆಪಿ ಮುಖಂಡರು ಒಡ್ಡಿದ ಆಮೀಷವನ್ನು ಬಹಿರಂಗಪಡಿಸಿದ್ದೂ ಅಲ್ಲದೇ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಈ ರೀತಿ ಮಾಡಿದ್ದು ಮತ್ತಾರೂ ಅಲ್ಲ. ಮೈಸೂರಿನ ಹುಣಸೂರು ಶಾಸಕ ಎಚ್​.ವಿಶ್ವನಾಥ್ ಅವರ ಪುತ್ರ ಪೂರ್ವಜ್ ವಿಶ್ವನಾಥ್‌ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಿಮ್ಮ ಕುದುರೆ ವ್ಯಾಪಾರಕ್ಕೆ ನಾವು ಬಲಿಯಾಗೋಲ್ಲ. ವಿಶ್ವನಾಥ್‌ರನ್ನ ಕುದುರೆ ವ್ಯಾಪಾರದಲ್ಲಿ ಕೊಂಡುಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ನನಗೆ ಎಷ್ಟು ಬಾರಿ ಕರೆ ಮಾಡಿದ್ರು ಅದು ಉಪಯೋಗಕ್ಕೆ ಬರೋಲ್ಲ‌. ನಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಅವಕಾಶವಾದಿ ರಾಜಕಾರಣ ಮಾಡೋಕೆ ವಿಶ್ವಾನಾಥ್‌ಗೆ ಬರೋಲ್ಲ. ನಿಮ್ಮ ಆಫರ್ ನಮಗೆ ಬೇಡ. ನಮ್ಮನ್ನ ಆಯ್ಕೆ ಮಾಡಿದ ಜನರಿಗೆ ನಾವು ಮೋಸ ಮಾಡೋಲ್ಲ ಎಂದು

ತನ್ನ ಫೇಸ್‌ಬುಕ್‌ನಲ್ಲಿ ವಿಶ್ವನಾಥ್ ಪುತ್ರ‌ ಬರೆದುಕೊಂಡಿದ್ದಾರೆ.

Next Story

RELATED STORIES