Top

ಬಹುಮತದ ಪ್ರಕ್ರಿಯೆ ಬಗ್ಗೆ ನಾನೂ ಉತ್ಸುಕ: ದೇವೇಗೌಡ

ಬಹುಮತದ ಪ್ರಕ್ರಿಯೆ ಬಗ್ಗೆ ನಾನೂ ಉತ್ಸುಕ: ದೇವೇಗೌಡ
X

ನಾಳೆ ಬಹುಮತ ಸಾಬೀತು ಪ್ರಕ್ರಿಯೆ ಬಗ್ಗೆ ನಾನೂ ಉತ್ಸುಕನಾಗಿದ್ದೇನೆ. ನಾಳೆಯ ಬೆಳವಣಿಗೆ ಏನಾಗುತ್ತೋ ಅದರ ಮೇಲೆ ನಮ್ಮ ಪಕ್ಷದ ನಿಲುವು ಕೈಗೊಳ್ಳಲಾಗುವುದು ಎಂದು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಹೇಳಿದ್ದಾರೆ.

ಪದ್ಮನಾಭನಗರ ನಿವಾಸದಲ್ಲಿ ಮಾತನಾಡಿದ ದೇವೇಗೌಡ, ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸುತ್ತೇನೆ. ನಾವು ಇತಿಹಾಸದಲ್ಲಿ ಈವರೆಗೂ ಪೂರ್ಣ ಬಹುಮತದಿಂದ ಸರ್ಕಾರ ರಚಿಸಿಯೇ ಇಲ್ಲ. ಅದರ ಬಗ್ಗೆ ಬೇಸರವಿದೆ ಎಂದು ಮಾರ್ಮಿಕವಾಗಿ ನುಡಿದರು.

ಇದೇ ವೇಳೆ ನನ್ನ ಮಗ ಸಿಎಂ ಆದರೆ ನನಗೆ ಸಂತೋಷವೂ ಆಗೊಲ್ಲ.ದುಃಖವೂ ಆಗೊಲ್ಲ. ನಾನೀಗ ಸ್ಥಿತಪ್ರಜ್ಱನನಾಗಿದ್ದೇನೆ. ಏನಾಗುತ್ತೋ ನೋಡಬೇಕು ಎಂದು ದೇವೇಗೌಡ ಹೇಳಿದರು.

Next Story

RELATED STORIES