ಪ್ಲೇ ಆಫ್ ಜೀವಂತವಾಗಿರಿಸಿದ ಆರ್ ಸಿಬಿ

X
TV5 Kannada18 May 2018 2:52 AM GMT
ಬೆಂಗಳೂರು: ಎಬಿಡಿ ವಿಲಿಯರ್ಸ್ ಮತ್ತು ಮೊಯಿನ್ ಅಲಿ ಅವರ ಅರ್ಧ ಶತಕದ ನೆರವಿನಿಂದ ಆರ್ಸಿಬಿ ತಂಡ ಸನ್ರೈಸರ್ಸ್ ವಿರುದ್ಧ 14 ರನ್ಗಳ ರೋಚಕ ಜಯ ಪಡೆದು ಪ್ಲೇ ಆಫ್ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ. ಚಿನ್ನಾಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ವಿರಾಟ್ ಪಡೆ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 218 ರನ್ಗಳ ಬೃಹತ್ ಮೊತ್ತವನ್ನೆ ಪೇರಿಸಿತು. ತಂಡದ ಸ್ಟಾರ್ ಬ್ಯಾಟ್ಸಮನ್ಗಳಾದ ಎಬಿಡಿ ವಿಲಿಯರ್ಸ್ (69) ಮತ್ತು ಮೊಯಿನ್ ಅಲಿ (65) ಅರ್ಧಶತಕ ತಂಡಕ್ಕೆ ಭದ್ರಬುನಾದಿ ಹಾಕಿತು. 219ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ಸನ್ರೈಸರ್ಸ್ ತಂಡಕ್ಕೆ ಆರಂಭಿಕ ಬ್ಯಾಟ್ಸ್ಮನ್ಗಳಾದ ಶಿಖರ್ ಧವನ್ (18) ಮತ್ತು ಅಲೇಕ್ಸ್ ಹೇಲ್ಸ್ (37)ಉತ್ತಮ ಆರಂಭ ನೀಡಿದ್ರು. ನಂತರ ಕೇನ್ ವಿಲಿಯಮ್ಸನ್(81) ಮತ್ತು ಕನ್ನಡಿಗ ಮನೀಶ್ ಪಾಂಡೆ ಅಜೇಯ 65 ರನ್ ಬಾರಿಸಿದರಾದ್ರು. ಕೊನೆಯಲಲಿ ಎಡವಿ ತಂಡವನ್ನ ಗೆಲ್ಲಿಸುವಲ್ಲಿ ವಿಫಲರಾದ್ರು.
Next Story