Top

ನಾಳೆ ಸಂಜೆ 4 ಗಂಟೆಗೆ ಬಹುಮತ ಸಾಬೀತು: ಸುಪ್ರೀಂ ಪ್ರಸ್ತಾಪಕ್ಕೆ ಒಪ್ಪಿಗೆ

24 ಗಂಟೆಯೊಳಗೆ ಬಹುಮತ ಸಾಬೀತುಪಡಿಸಿ ಅಥವಾ ರಾಜ್ಯಪಾಲರ ನಡೆ ಕುರಿತು ಪೂರ್ಣ ವಿಚಾರಣೆ ಆಗುವವರೆಗೂ ಕಾಯಬೇಕು ಎಂದು ಸುಪ್ರೀಂಕೋರ್ಟ್​ ನೀಡಿದ ಎರಡು ಆಯ್ಕೆಗಳಲ್ಲಿ ನಾಳೆಯೇ ಬಹುಮತ ಸಾಬೀತುಪಡಿಸಲು ಉಭಯ ಪಕ್ಷಗಳು ಒಪ್ಪಿಗೆ ಸೂಚಿಸಿವೆ. ಇದರೊಂದಿಗೆ ನಾಳೆ ಸಂಜೆ 4 ಗಂಟೆಗೆ ಬಹುಮತ ಸಾಬೀತುಪಡಿಸಲು ಸುಪ್ರೀಂಕೋರ್ಟ್ ಸೂಚಿಸಿದೆ.

ಸಂಖ್ಯಾಬಲ ಇಲ್ಲದಿದ್ದರೂ ರಾಜ್ಯಪಾಲರು ಸರಕಾರ ರಚನೆಗೆ ಬಿಜೆಪಿಗೆ ಆಹ್ವಾನ ನೀಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠ, ಇಲ್ಲಿ ಸಂಖ್ಯಾಬಲವಷ್ಟೇ ಮುಖ್ಯವಾಗಿದೆ. ಹಾಗಾಗಿ ರಾಜ್ಯಪಾಲರ ನಿರ್ಣಯ ಕುರಿತು ವಿಸ್ತೃತ ಚರ್ಚೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತು.

ಸದ್ಯದ ಪರಿಸ್ಥಿತಿಯಲ್ಲಿ ಸಂಖ್ಯಾಬಲ ಮುಖ್ಯವಾಗಿರುವುದರಿಂದ ನಾಳೆಯೊಳಗೆ ಬಹುಮತ ಸಾಬೀತುಪಡಿಸಬೇಕು. ಇದಕ್ಕೆ ಒಪ್ಪದಿದ್ದಲ್ಲಿ ಮುಖ್ಯಮಂತ್ರಿಯಾಗಿ ಬಿ.ಎಸ್​.ಯಡಿಯೂರಪ್ಪ ಸ್ವೀಕರಿಸಿದ ಪ್ರಮಾಣ ವಚನ ಅನರ್ಹಗೊಳ್ಳಲಿದೆ. ಆಗ ನಾವು ರಾಜ್ಯಪಾಲರ ನಿರ್ಧಾರದ ಕುರಿತು ವಿಸ್ತೃತ ಚರ್ಚೆ ನಡೆಸಿ ನಂತರ ತೀರ್ಪು ಪ್ರಕಟಿಸುವವರೆಗೂ ಕಾಯಬೇಕು ಎಂದು ಹೇಳಿತು.

ಇದೇ ವೇಳೆ ಬಿಜೆಪಿ ಪರ ವಕೀಲರು ನೀಡಿದ ಬೆಂಬಲ ಪತ್ರದಲ್ಲಿ ಶಾಸಕರ ಹೆಸರೇ ನಮೂದಾಗಿರಲಿಲ್ಲ. ಇದರಿಂದ ಬಿಜೆಪಿಗೆ ಹಿನ್ನಡೆ ಉಂಟಾಯಿತು.

Next Story

RELATED STORIES