Top

ನಟಿ ಅನು ಜೊತೆ ಕ್ರಿಕೆಟಿಗ ಅಯ್ಯಪ್ಪ ನಿಶ್ಚಿತಾರ್ಥ

ನಟಿ ಅನು ಜೊತೆ ಕ್ರಿಕೆಟಿಗ ಅಯ್ಯಪ್ಪ ನಿಶ್ಚಿತಾರ್ಥ
X

ಬಿಗ್ ಬಾಸ್ ಖ್ಯಾತಿಯ ಅಯ್ಯಪ್ಪ ಹಾಗೂ ಸ್ಯಾಂಡಲ್​ವುಡ್ ನಟಿ ಅನು ದಾಂಪತ್ಯ ಜೀವನಕ್ಕೆ ಸಜ್ಜಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಕೊಡವ ಸಮಾಜದಲ್ಲಿ ಎರಡು ಕುಟುಂಬಗಳ ಸಮುಖದಲ್ಲಿ ಪರಸ್ಪರ ರಿಂಗ್ ಬದಲಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಯ್ಯಪ್ಪ ಮಾಜಿ ಕ್ರಿಕೆಟಿಗನಾಗಿದ್ದು, ಕರ್ನಾಟಕ ಪರ ರಣಜಿಯಲ್ಲಿ ಹಲವು ಪಂದ್ಯಗಳನ್ನಾಡಿದ್ದಾರೆ.

ನಟಿ ಅನು ಕರ್ವ, ಕಥಾ ವಿಚಿತ್ರ, ಲೈಫು ಸೂಪರ್, ಪಾನಿಪುರಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅನು ಮತ್ತುಅಯ್ಯಪ್ಪ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಮದುವೆ ಡೇಟ್ ಸದ್ಯದಲ್ಲೇ ಫಿಕ್ಸ್ ಆಗಬೇಕಿದೆ. ಇಬ್ಬರೂ ಸಿನಿಮಾ ಬ್ಯಾಕ್ ಗ್ರೌಂಡ್ ಫ್ಯಾಮಿಲಿಯಿಂದ ಬಂದಿರುವುದರಿಂದ ಮದುವೆಗೆ ಸ್ಯಾಂಡಲ್​ವುಡ್​ನ ಗಣ್ಯಾತಿಗಣ್ಯರು ಸಾಕ್ಷಿಯಾಗಲಿದ್ದಾರೆ.

Next Story

RELATED STORIES