Top

"ಡಬಲ್​ ಇಂಜಿನ್"​ ಚಿತ್ರದಲ್ಲಿ ನಗಿಸೋಕೆ ಬರ್ತಾರೆ ಕಾಮಿಡಿ ಕಿಂಗ್​ ಚಿಕ್ಕಣ್ಣ

ಡಬಲ್​ ಇಂಜಿನ್​ ಚಿತ್ರದಲ್ಲಿ ನಗಿಸೋಕೆ ಬರ್ತಾರೆ ಕಾಮಿಡಿ ಕಿಂಗ್​ ಚಿಕ್ಕಣ್ಣ
X

ಸಿನಿಮಾ ಡೆಸ್ಕ್ : ಬಾಂಬೆ ಮಿಠಾಯಿ ಚಿತ್ರದಲ್ಲಿ ಬಾಳೆಹಣ್ಣು ತೋಟದ ಮಾಲೀಕನಾಗಿ, ಡಬಲ್​ ಮೀನಿಂಗ್​ ಮಾತನಾಡುತ್ತ ಪ್ರೇಕ್ಷಕರನ್ನ ರಂಜಿದ್ದ ಕಾಮಿಡಿ ಕಿಂಗ್​ ಚಿಕ್ಕಣ್ಣ ಇದೀಗ ಮತ್ತೆ ದೊಡ್ಡ ಪರದೆಯ ಮೇಲೆ ಅಭಿಮಾನಿಗಳನ್ನ ನಗಿಸೊಕೆ ಬರುತ್ತಿದ್ಧಾರೆ.

ಕನ್ನಡದಲ್ಲಿ ಬಾಂಬೆ ಮಿಠಾಯಿ ಚಿತ್ರವನ್ನ ನಿರ್ದೇಶಿಸಿದ್ದ ಚಂದ್ರ ಮೋಹನ್​ ಲಾಂಗ್​ ಗ್ಯಾಪ್​ ನಂತ್ರ ಡಬಲ್​ ಇಂಜಿನ್​ ಚಿತ್ರ ನಿರ್ದೇಶನ ಮಾಡುವ ಮೂಲಕ ಮತ್ತೆ ಡೈರೆಕ್ಟರ್ ಕ್ಯಾಪ್​ ತೊಟ್ಟಿದ್ದಾರೆ. ಈ ಚಿತ್ರದಲ್ಲೂ ಕೂಡ ಮತ್ತೆ ಕಾಮಿಡಿ ಕಿಂಗ್​ ಚಿಕ್ಕಣ್ಣ ನಟಿಸ್ತಿರೋದು ವಿಶೇಷ.. ಬಾಂಬೆ ಮಿಠಾಯಿ ಚಿತ್ರದಲ್ಲಿ ನಿರಂಜನ್​ ದೇಶ್​ಪಾಂಡೆ ಹಾಗು ಶೈನ್​ ಶೆಟ್ಟಿ ಕಾಂಬಿನೇಶನ್​ ಇರುವ ಹಾಗೆ ಈ ಚಿತ್ರದಲ್ಲೂ ಅದೇ ಪಾಟರ್ನ್​ ಕಂಟಿನ್ಯು ಆಗಿದೆ.

ಈ ಚಿತ್ರದಲ್ಲೂ ಡಬಲ್​ ಮೀನಿಂಗ್​ನಲ್ಲೆ ಮಾತನಾಡಿ ಜನರನ್ನ ರಂಜಿಸಲಿದ್ಧಾರೆ ಚಿತ್ರದ ನಾಯಕರು.. ಡಬಲ್​ ಇಂಜಿನ್​​ ಚಿತ್ರದಲ್ಲಿ ಕೂಡ ಚಿಕ್ಕಣ್ಣನಿಗೆ ಜೋಡಿಯಾಗಿ ಅಶೋಕ್​ ಹಾಗು ಪ್ರಭು ಮುಂದ್ಕರ್​ ಸಾಥ್​ ಕೊಟ್ಟಿದ್ದಾರೆ. ಜೊತೆಗೆ ನೀರ್​ದೋಸೆ ನಂತರ ಸುಮನ್​ ರಂಗನಾಥ್​ ಡಬಲ್​ ಇಂಜಿನ್​ ಚಿತ್ರದಲ್ಲಿ ಬಣ್ಣ ಹಚ್ಚಿದ್ಧಾರೆ.

ಈಗಾಗಲೇ ಚಿತ್ರದ ಫಸ್ಟ್​ ಲುಕ್ ಹಾಗು ಟ್ರೈಲರ್​​ ರಿವೀಲ್​ ಮಾಡಿದೆ ಚಿತ್ರತಂಡ. ಟ್ರೈಲರ್​ ನೋಡುತಿದ್ದಂತೆ ಚಿತ್ರವನ್ನ ನೋಡಲೇಬೇಕು ಅನ್ನೋ ಕುತೂಹಲ ಮೂಡಿಸಿದೆ..

Next Story

RELATED STORIES