ಡಾಲಿ ಜೊತೆ ಸೂರಿ ಹೊಸ ಚಿತ್ರ

ಸ್ಯಾಂಡಲ್ವುಡ್ನಲ್ಲಿ ಹೊಸ ದಾಖಲೆ ಬರೆದ ಟಗರು ಸಿನಿಮಾ 75 ದಿನಗಳನ್ನ ಪೂರೈಸಿ ಶತದಿನದತ್ತ ಮುನ್ನುಗ್ತಿದೆ. ಅದ್ದೂರಿ ಮೇಕಿಂಗ್, ಮ್ಯೂಸಿಕ್, ಸ್ಟೋರಿ, ಸ್ಕ್ರೀನ್ಪ್ಲೇ, ನಿರ್ದೇಶಕ ಸೂರಿ ಸೃಷ್ಟಿಸಿದ್ದ ಪಾತ್ರಗಳು ಎಲ್ಲವೂ ಟಗರು ಚಿತ್ರದ ಪ್ಲಸ್ ಪಾಯಿಂಟ್. ಈ ಮೂಲಕ ಟಗರು ಸಿನಿಮಾ ಸಕ್ಸಸ್ ಹಾದಿಯಲ್ಲಿ ಮುನ್ನುಗ್ಗಿದೆ.
ಅಂದ್ಹಾಗೇ ಟಗರು ಚಿತ್ರದಲ್ಲಿ ದೊಡ್ಡ ಮಟ್ಟದ ಕ್ರೇಜ್ ಹುಟ್ಟಹಾಕಿದ್ದು ಡಾಲಿ ಪಾತ್ರ. ಈ ಚಿತ್ರದಲ್ಲಿ ಧನಂಜಯ್ ಡಾಲಿ ಅವತಾರವನ್ನು ನೋಡಿ ಇಡೀ ಗಾಂಧೀನಗ್ರವೇ ಬೆಚ್ಚಿ ಬಿದ್ದಿತ್ತು. ನಟ ರಾಕ್ಷಸ ಎಂಬ ಬಿರುದು ಕೂಡ ಡಾಲಿಗೆ ಸಿಕ್ಕಿತ್ತು. ಆ ನಂತ್ರ ಧನಂಜಯ್ ಮತ್ತೊಮ್ಮೆ ಸೂರಿ ನಿರ್ದೇಶನದಲ್ಲಿ ಕೆಲಸ ಮಾಡಿದ್ರೆ ಚೆನ್ನಾಗಿರುತ್ತೆ ಅಂತ ಅಭಿಮಾನಿಗಳು ಆಶಯ ವ್ಯಕ್ತಪಡಿಸಿದ್ರು.
ಇದೀಗ ಈ ಆಶಯ ನಿಜವಾಗೋ ಸಮಯ ಬಂದಿದೆ. ಸೂರಿ ನಿರ್ದೇಶನದಲ್ಲಿ ನಟ ಧನಂಜಯ್ ನಾಯಕನಟನಾಗಿ ಅಭಿನಯಿಸೋ ಅವಕಾಶ ಪಡೆದುಕೊಂಡಿದ್ದಾರೆ. ಟಗರು ಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ಸೂರಿ ಮತ್ತು ಧನಂಜಯ್ ಕಾಂಬಿನೇಷನ್ನ ಹೊಸ ಚಿತ್ರ ಅನೌನ್ಸ್ ಆಗಲಿದೆ. ಚಿತ್ರದ ಬಗ್ಗೆ ಕೊಂಚವೂ ಮಾಹಿತಿ ಬಿಟ್ಟುಕೊಡದ ಚಿತ್ರತಂಡ ಟಗರು 100 ಡೇಸ್ ಆದ ದಿನ ಸಿನಿಪ್ರಿಯರಿಗೆ ಸಪ್ರೈಸ್ ಕೊಡಲಿದೆ. ಈ ಮೂಲಕ ಸೂರಿ ನಿರ್ದೇಶನದ ಸಿನಿಮಾದ ಯಾವ ಸಿನಿಮಾದಲ್ಲಿ ಧನಂಜಯ್ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.